ಆಶ್ಲೀಲ,ಅಸಭ್ಯ ವಿಡಿಯೋಗಳ ಪ್ರಸಾರ: 18 ಓಟಿಟಿ,ವೆಬ್‌ಸೈಟ್‌,ಆ್ಯಪ್ ಗಳನ್ನು ನಿಷೇಧಿಸಿದ ಕೇಂದ್ರ

ನವದೆಹಲಿ: ಆಶ್ಲೀಲ ವಿಡಿಯೋ ಕಂಟೆಂಟ್‌ ಹಾಗೂ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ ಓಟಿಟಿ ಫ್ಲಾಟ್‌ ಫಾರ್ಮ್‌, ವೆಬ್‌ ಸೈಟ್‌ ಹಾಗೂ ಆ್ಯಪ್ ಗಳನ್ನು ನಿಷೇಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆದೇಶ ಹೊರಡಿಸಿದೆ.

ಹಲವಾರು ಬಾರಿ ಎಚ್ಚರಿಕೆಗಳನ್ನು ನೀಡಿದ ನಂತರ ಕೇಂದ್ರ ಸರ್ಕಾರವು ಈ OTT ಪ್ಲಾಟ್‌ಫಾರ್ಮ್‌ಗಳ ಜೊತೆ ಅವುಗಳ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ನಿಷೇಧಿಸಿದೆ. ಬ್ಯಾನ್‌ ಆದ ಈ ಕೆಲ ಓಟಿಟಿ ಹಾಗೂ ಆ್ಯಪ್ ಗಳಲ್ಲಿ ಆಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದವು.
ಅಶ್ಲೀಲ ಮತ್ತು ಅಸಭ್ಯ ಕಂಟೆಂಟ್‌ ಗಳನ್ನು ಹೊಂದಿದ್ದ 18 OTT ಪ್ಲಾಟ್‌ಫಾರ್ಮ್‌ಗಳನ್ನು ,19 ವೆಬ್‌ಸೈಟ್‌ಗಳು, 10 ಅಪ್ಲಿಕೇಶನ್‌ಗಳು, OTT ಪ್ಲಾಟ್‌ಫಾರ್ಮ್‌ಗಳ 57 ಸಾಮಾಜಿಕ ಮಾಧ್ಯಮದ ಖಾತೆಗಳನ್ನು ರಾಷ್ಟ್ರವ್ಯಾಪಿ ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

ನಿಷೇಧಿತ 10 ಅಪ್ಲಿಕೇಶನ್‌ಗಳಲ್ಲಿ ಏಳು ಆ್ಯಪ್ ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತು ಮೂರು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿತ್ತು.

ಬ್ಯಾನ್‌ ಆದ ಓಟಿಟಿ ಫ್ಲಾಟ್‌ ಫಾರ್ಮ್ ಗಳು:

ಡ್ರೀಮ್ಸ್‌ ಫಿಲ್ಮ್ಸ್‌
ವೂವಿ ಯೆಸ್‌ಮಾ,
ಅನ್‌ಕಟ್‌ ಅಡ್ಡಾ
ಟ್ರೈ ಫ್ಲಿಕ್ಸ್‌
ಎಕ್ಸ್‌ ಪ್ರೈಮ್‌
ನಿಯೋನ್‌ ಎಕ್ಸ್‌ ವಿಐಪಿ
ಬೇಶರಮ್ಸ್‌, ಹಂಟರ್ಸ್‌
ರ‍್ಯಾಬಿಟ್‌
ಎಕ್ಸ್‌ಟ್ರಾಮೂಡ್‌
ನ್ಯೂಫ್ಲಿಕ್ಸ್‌, ಮೂಡ್‌ಎಕ್ಸ್‌
ಮೋಜ್‌ಫ್ಲಿಕ್ಸ್‌
ಹಾಟ್‌ ಶಾಟ್ಸ್‌ ವಿಐಪಿ
ಫುಗಿ
ಚಿಕೂಫ್ಲಿಕ್ಸ್‌
ಪ್ರೈಮ್‌ ಪ್ಲೇ ಒಟಿಟಿ
ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾದ ಕಂಟೆಂಟ್‌ ಗಳು ಅಶ್ಲೀಲ, ಅಸಭ್ಯ ಮತ್ತು ಮಹಿಳೆಯನ್ನು ಅವಮಾನಕರವಾಗಿ ಚಿತ್ರಿಸಿದ ರೀತಿಯಲ್ಲಿದೆ. ಇದಲ್ಲದೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ, ಕುಟುಂಬದ ನಡುವಿನ ಸಂಬಂಧವನ್ನು ಆಶ್ಲೀಲ ರೀತಿಯಲ್ಲಿ ತೋರಿಸಲಾಗಿರುವ ವಿಡಿಯೋಗಳಿವೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.
“ಒಟಿಟಿ ಅಪ್ಲಿಕೇಶನ್‌ಗಳಲ್ಲಿ ಒಂದು ಓಟಿಟಿ 1 ಕೋಟಿಗೂ ಹೆಚ್ಚು ಡೌನ್‌ಲೋಡ್‌ ಆಗಿದೆ. ಇನ್ನೆರಡು ಗೂಗಲ್ ಪ್ಲೇ ಸ್ಟೋರ್‌ನಲ್ಲಿ 50 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ ಆಗಿತ್ತು. ಇನ್ನು ಓಟಿಟಿ ಸಾಮಾಜಿಕ ಖಾತೆಯಲ್ಲಿ 32 ಲಕ್ಷ ಫಾಲೋವರ್ಸ್‌ ಇತ್ತು ಎಂದು ಸಚಿವಾಲಯ ಉಲ್ಲೇಖಿಸಿದೆ

Latest Indian news

Popular Stories