ಕೆನಡಾ ವಿವಾದ ಭಾರತದೊಂದಿಗಿನ ವ್ಯಾಪಾರ ಮಾತುಕತೆ ಮೇಲೆ ಪರಿಣಾಮ ಬೀರಲ್ಲ: ಯುಕೆ ಸರ್ಕಾರ ಸ್ಪಷ್ಟನೆ

ಲಂಡನ್: ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ಕುರಿತ ‘ಗಂಭೀರ ಆರೋಪಗಳು’ ಭಾರತದೊಂದಿಗೆ ನಡೆಯುತ್ತಿರುವ ತನ್ನ ದೇಶದ ವ್ಯಾಪಾರ ಮಾತುಕತೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಯುನೈಟೆಡ್ ಕಿಂಗ್‌ಡಮ್ ಸರ್ಕಾರ ಮಂಗಳವಾರ ಹೇಳಿದೆ.

ಭಾರತ-ಕೆನಡಾ ರಾಜತಾಂತ್ರಿಕ ಕಲಹವು ಭಾರತ-ಯುಕೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ಬೀರಬಹುದೆ ಎಂಬ ಪ್ರಶ್ನೆಗೆ ಉತ್ತರಿಸಿದ  ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರ ವಕ್ತಾರರು, ಕಳೆದ ವರ್ಷದಿಂದ ಭಾರತ ಮತ್ತು ಯುಕೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ನಡೆಸುತ್ತಿವೆ. ಅಂದಾಜು ಜಿಬಿಪಿ 36-ಶತಕೋಟಿ ದ್ವಿಪಕ್ಷೀಯ ವ್ಯಾಪಾರ ಪಾಲುದಾರಿಕೆಯನ್ನು ಗಣನೀಯವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿರುವ ಒಪ್ಪಂದದ ಕಡೆಗೆ 12 ಸುತ್ತಿನ ಮಾತುಕತೆಗಳು ಪೂರ್ಣಗೊಂಡಿವೆ. “ವ್ಯಾಪಾರ ಮಾತುಕತೆಗಳ ಕೆಲಸವು ಮೊದಲಿನಂತೆಯೇ ಮುಂದುವರಿಯುತ್ತದೆ ಎಂದು ತಿಳಿಸಿದರು.

ಆರೋಪಗಳನ್ನು ಪರಿಗಣಿಸಿ ವ್ಯಾಪಾರ ಒಪ್ಪಂದವನ್ನು ಮುಂದುವರಿಸುವುದು ಸೂಕ್ತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ವಕ್ತಾರರು ‘ಈ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ಕೆನಡಾದ ಪಾಲುದಾರರು ಮಾಡುತ್ತಿರುವ ಕೆಲಸದಿಂದ ಮುಂದೆ ಹೋಗದಿರುವುದು ಮುಖ್ಯವಾಗಿದೆ. ಭಾರತವು ಈ ಬಗ್ಗೆ ತಮ್ಮದೇ ಆದ ಹೇಳಿಕೆ ನೀಡಿದೆ. ನಾವು ವ್ಯಾಪಾರ ಒಪ್ಪಂದದ ಮಾತುಕತೆ ನಡೆಸುತ್ತಿರುವ ದೇಶಗಳೊಂದಿಗೆ ಕಳವಳ ಹೊಂದಿದ್ದರೆ ನೇರವಾಗಿ ನಾವು ಅವುಗಳನ್ನು ಪ್ರಶ್ನಿಸುತ್ತೇವೆ. ಈ ವಿಚಾರದಲ್ಲಿ ಕೆನಡಾ ಮತ್ತು ಭಾರತ ನಡುವಿನ ವಿವಾದ ಬೆರೆಸಲು ಯುಕೆ ಎದುರು ನೋಡುವುದಿಲ್ಲ ಎಂದು ವಕ್ತಾರರು ಹೇಳಿಸಿದರು. 

Latest Indian news

Popular Stories