Featured StoryState News

ವಿರೋಧದ ಮಧ್ಯೆ ಚವ್ಹಾಣ್ ಪುತ್ರನ ನಿಶ್ಚಿತಾರ್ಥ: ಯುವತಿ ನಿವಾಸಕ್ಕೆ ಪೊಲೀಸ್‌ ಸರ್ಪಗಾವಲು ! | 6 ಮಂದಿ ವಿರುದ್ಧ ಎಫ್‌ಐಆರ್

ಬೀದರ್ :
ಔರಾದ್ ಶಾಸಕ ಪ್ರಭು ಚವ್ಹಾಣ್ ಪುತ್ರ ಪ್ರತೀಕ್ ಚವ್ಹಾಣ್ ನಿಶ್ಚಿತಾರ್ಥವು ಯುವತಿಯೋರ್ವಳ ಕುಟುಂಬದ ವಿರೋಧದ ಮಧ್ಯೆಯೂ ಔರಾದ್ ತಾಲೂಕಿನ ಬೋಂತಿ ತಾಂಡಾದಲ್ಲಿ ಬಂಧು-ಬಳಗದ ಮಧ್ಯೆ ಸಕಲ ಸಂಪ್ರದಾಯದೊಂದಿಗೆ ನೆರವೇರಿತು.

ಶಾಸಕ ಪ್ರಭು ಚವ್ಹಾಣ್ ಪುತ್ರ ಪ್ರತೀಕ್ ಚವ್ಹಾಣ್ ಜೊತೆ ತಮ್ಮ ಮಗಳಾದ ಪೂಜಾಳೊಂದಿಗೆ 2021ರಲ್ಲಿ ನಿಶ್ಚಿತಾರ್ಥ ನೆರವೇರಿದ್ದು,
ಈಗ ಮೋಸ ಮಾಡಲಾಗಿದೆ ಎಂದು ಕಿರುಗುಣವಾಡಿ ನಿವಾಸಿ ಯುವತಿ ತಂದೆ ಗಂಗಾಧರ್ ರಾಠೋಡ್ ಭಾನುವಾರ ಪತ್ರಿಕಾಗೋಷ್ಟಿ ನಡೆಸಿ ಆರೋಪಿಸಿದರು.

ತಮ್ಮ ಕುಟುಂಬದ 26 ಎಕರೆ ಭೂಮಿ ಸಂಬಂಧ ಬೆಳೆಸುವ ಭರವಸೆ ನೀಡಿ ಚವ್ಹಾಣ್ ತಮ್ಮ ಹೆಸರಿಗೆ ಮಾಡಿಕೊಂಡು ವಂಚಿಸಿದ್ದಾರೆ. ತಮಗೆ ನ್ಯಾಯ ಸಿಗದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಯೂ ಹಾಕಿದ್ದರು.

ಏತನ್ಮಧ್ಯೆ, ಕಿರುಗುಣವಾಡಿಯಲ್ಲಿರುವ ಗಂಗಾಧರ್ ರಾಠೋಡ್ ನಿವಾಸದ ಸುತ್ತ ನಿಶ್ಚಿತಾರ್ಥದ ದಿನವಾದ ಸೋಮವಾರ ಪೊಲೀಸರು ಸರ್ಪಗಾವಲು ಹಾಕಿದ್ದರು. ಸಿಪಿಐ, ಪಿಎಸ್‌ಐ ಹಾಗೂ ಪೊಲೀಸರು ಮನೆ ಮುಂದೆ ಠಿಕಾಣಿ ಹೂಡಿದ್ದು, ಮನೆಯಿಂದ ಯಾರೂ ಹೊರಗಡೆ ಹೋಗಲು ಅವಕಾಶ ಕಲ್ಪಿಸಿಲ್ಲ ಎಂದು ಗಂಗಾಧರ್ ರಾಠೋಡ್ THG ಕನ್ನಡ ಕ್ಕೆ ತಿಳಿಸಿದ್ದಾರೆ.

ನಿಶ್ಚಿತಾರ್ಥ ಹಿನ್ನೆಲೆ ಶಾಸಕ ಚವ್ಹಾಣ್ ಪುತ್ರ ಪ್ರತೀಕ್ ಪೊಲೀಸ್ ಠಾಣೆಗೆ ಅರ್ಜಿ ನೀಡಿದ್ದು, ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಸಂಭವವಿದೆ ಎಂದು ತಿಳಿಸಿದರು. ಇದರನ್ವಯ ಯುವತಿ ಪೂಜಾ ಸೇರಿ ಕುಟುಂಬದ ಒಟ್ಟು 6 ಮಂದಿ ವಿರುದ್ಧ ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

THG ಬೀದರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button