ಬೆಂಗಳೂರಿನಲ್ಲಿ ಮುಂದುವರೆದ ಮಳೆ ಅಬ್ಬರ; ಕೆರೆಯಂತಾದ ರಸ್ತೆಗಳು

ಬೆಂಗಳೂರು, ಮೇ.09: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿದ್ದು,(Bengaluru Rain) ಇಂದು(ಮೇ,09) ಕೂಡ ವರುಣನ ಆರ್ಭಟ ಜೋರಾಗಿದೆ. ಮೆಜೆಸ್ಟಿಕ್, ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ವಸಂತನಗರ, ಶಿವಾಜಿ ನಗರ, ಜಯನಗರ, ಚಂದ್ರಲೇಔಟ್, ಬನಶಂಕರಿ, ಸದಾಶಿವನಗರ, ಆರ್‌.ಟಿ.ನಗರ, ಹೆಬ್ಬಾಳ, ಸಹಕಾರನಗರ, ಭಾಷ್ಯಂ ಸರ್ಕಲ್ ಸೇರಿದಂತೆ ಮಹಾನಗರದ ಹಲವೆಡೆ ಮಳೆ ಶುರುವಾಗಿದ್ದು, ಮಳೆ ಹಿನ್ನೆಲೆ ವಾಹನ​ ಸವಾರರು ಪರದಾಡುವಂತಾಗಿದೆ. ಇನ್ನು ಮಳೆಯಿಂದ ಬಿಸಿಲಿಗೆ ಸುಸ್ತಾಗಿದ್ದ ರಾಜ್ಯ ರಾಜಧಾನಿ ಕೂಲ್​ ಆಗಿದೆ.

ನಿನ್ನಯಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಆದ ಭಾರಿ ಮಳೆಗೆ ಬಾಳೆ, ಅಡಿಕೆ ಮರಗಳು ನೆಲಕಚ್ಚಿದ್ದವು. ಇಂದು ಕೂಡ ಪೀಣ್ಯಾ,ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಮಲ್ಲಸಂದ್ರ ಸೇರಿದಂತೆ ಬಿರುಗಾಳಿ ಸಹಿತ ಬಾರಿ ಮಳೆ ಶುರುವಾಗಿದೆ. ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಪರದಾಡಿದ್ದಾರೆ.

ಇನ್ನು ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಹೀಗಾಗಿ ಗುಡುಗು ಸಹಿತ 40 ರಿಂದ 50 ಕೀ.ಮಿ ವೇಗದಲ್ಲಿ ಗಾಳಿಯೊಂದಿಗೆ ಮಳೆ ಬರಲಿದ್ದು, ಮಳೆಯಿಂದ ಜನರು ಜಾಗ್ರತೆ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಜೊತೆಗೆ ಮೇ. 12 ನೇ ತಾರೀಖಿನವರೆಗೂ ಬೆಂಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆಯಿದೆ ಎಂದು ಮೂನ್ಸುಚನೆ ನೀಡಿದೆ.

Latest Indian news

Popular Stories