ನಾಳೆ ಡಿಎಂಕೆ ಫೈಲ್ಸ್ ಬಿಡುಗಡೆ: ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ

ಚೆನ್ನೈ: ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಏ.14 ರಂದು ಡಿಎಂಕೆ ಫೈಲ್ಸ್ ನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಡಿಎಂಕೆ ಸಚಿವರಿಗೆ ಸಂಬಂಧಿಸಿದ ಭ್ರಷ್ಟಾಚಾರದ ದಾಖಲೆಗಳನ್ನು ತಮಿಳುನಾಡಿನ ಹೊಸ ವರ್ಷವಾದ ಏ.14 ರಂದು ಬಿಡುಗಡೆ ಮಾಡುತ್ತೇನೆ ಎಂದು ಅಣ್ಣಾಮಲೈ ಕೆಲವು ತಿಂಗಳುಗಳ ಹಿಂದೆಯೇ ಹೇಳಿದ್ದರು.
 
ಈಗ ಮತ್ತೊಮ್ಮೆ ಟ್ವೀಟ್ ಮಾಡಿ ಬೆಳಿಗ್ಗೆ 10:15 ಕ್ಕೆ ದಾಖಲೆಗಳ ಬಿಡುಗಡೆ ಮಾಡುತ್ತೇನೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ. ಡಿಎಂಕೆ ನಾಯಕ ದಿವಂಗತ ಎಂ ಕರುಣಾನಿಧಿ, ಸಿಎಂ ಎಂಕೆ ಸ್ಟ್ಯಾಲಿನ್ ಹಾಗೂ ಅವರ ಕುಟುಂಬ ಸದಸ್ಯರ ಫೋಟೋಗಳಿರುವ 10 ಸೆಕೆಂಡ್ ಗಳ ವೀಡಿಯೋವನ್ನು ಅಣ್ಣಾಮಲೈ ಹಂಚಿಕೊಂಡಿದ್ದಾರೆ.

Latest Indian news

Popular Stories