ಸುರಾನಾ ಗ್ರೂಪ್ ಆಫ್‌ ಕಂಪನೀಸ್‌ಗೆ ಸೇರಿದ 124 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ

ಬೆಂಗಳೂರು: ಚೆನ್ನೈ ಮೂಲದ ಸುರಾನಾ ಗ್ರೂಪ್ ಆಫ್ ಕಂಪನೀಸ್‌ಗೆ ಸಂಬಂಧಿಸಿದ ವಿವಿಧ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಸ್ವಾಧೀನದಲ್ಲಿರುವ ಸುಮಾರು 124 ಕೋಟಿ ರೂಪಾಯಿ ಮೌಲ್ಯದ 78 ಸ್ಥಿರಾಸ್ತಿಗಳು ಮತ್ತು 16 ಚರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. 

ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 3,986 ಕೋಟಿ ರೂ. ಬಾಕಿ ಮೊತ್ತ ಪಾವತಿಯಲ್ಲಿ ನಡೆದಿರುವ ವಂಚನೆಯ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಯ ನಿಬಂಧನೆಗಳ ಅಡಿಯಲ್ಲಿ ಇ.ಡಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

124.95 ಕೋಟಿ ರೂ. (ಅಂದಾಜು) ಮೌಲ್ಯದ ಆಸ್ತಿಯನ್ನು ಇ.ಡಿ ಈ ಮೊದಲು ಜಪ್ತಿ ಮಾಡಿತ್ತು. ಇದೀಗ ಪ್ರಕರಣದಲ್ಲಿ ಜಪ್ತಿ ಮಾಡಿಕೊಂಡ ಆಸ್ತಿಯ ಒಟ್ಟು ಮೌಲ್ಯ 248.98 ಕೋಟಿ ರೂ. ಆಗಿದೆ.

ಸುರಾನಾ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಇತರರು, ಸುರಾನಾ ಪವರ್ ಲಿಮಿಟೆಡ್ ಮತ್ತು ಇತರರು ಮತ್ತು ಸುರಾನಾ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಇತರರ ವಿರುದ್ಧ ಬೆಂಗಳೂರಿನ ಸಿಬಿಐ ದಾಖಲಿಸಿದ್ದ ಮೂರು ಎಫ್‌ಐಆರ್‌ಗಳ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಆರಂಭಿಸಿದ ಕೇಂದ್ರದ ತನಿಖಾ ಸಂಸ್ಥೆಯು ಜುಲೈ 2022ರಲ್ಲಿ ನಾಲ್ವರನ್ನು ಬಂಧಿಸಿದೆ.

ಈ ಮೂರು ಕಂಪನಿಗಳು ಶೆಲ್ ಕಂಪನಿಗಳ ಜಾಲವನ್ನು ಸ್ಥಾಪಿಸುವ ಮೂಲಕ ಬ್ಯಾಂಕುಗಳಿಗೆ  ವಂಚಿಸಿದವು. ಈ ಕಂಪನಿಗಳಲ್ಲಿ ತಮ್ಮದೇ ಜನರನ್ನು ಪ್ರಮುಖ ಸ್ಥಾನಗಳಲ್ಲಿ ನೇಮಿಸಿದರು ಮತ್ತು ಯಾವುದೇ ನೈಜ ಸರಕು ಅಥವಾ ಸೇವೆಗಳ ವಿನಿಮಯವಿಲ್ಲದೆ ಕಾಗದದ ಮೇಲೆ ನಕಲಿ ವಹಿವಾಟುಗಳಲ್ಲಿ ತೊಡಗಿಕೊಂಡಿತು. ಈ ಮೂಲಕ ಬ್ಯಾಂಕ್‌ಗಳನ್ನು ವಂಚಿಸಲು ಮತ್ತು ಮೋಸದ ಮಾರ್ಗಗಳ ಮೂಲಕ ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಬಳಸಲಾಯಿತು’ ಎಂದು ತನಿಖೆಯಿಂದ ತಿಳಿದುಬಂದಿದೆ. 

ಬ್ಯಾಂಕುಗಳ ಕ್ರೆಡಿಟ್ ಬಂಡವಾಳ ಬ್ಯಾಂಕ್ ನಿಧಿಗಳನ್ನು ತಮ್ಮ ಸಹವರ್ತಿ ಶೆಲ್ ಕಂಪನಿಗಳಿಂದ ಅಸುರಕ್ಷಿತ ಸಾಲಗಳೆಂದು ಹೆಸರಿಸುವ ಮೂಲಕ ಕಂಪನಿಯ ಪ್ರವರ್ತಕರ ವೈಯಕ್ತಿಕ ಖಾತೆಗಳಿಗೆ ಮರುನಿರ್ದೇಶಿಸಲಾಗುತ್ತದೆ. ನಂತರ, ಮುಖ್ಯ ಕಂಪನಿಗಳಲ್ಲಿ ಮರುಹೂಡಿಕೆ ಮಾಡಲಾಗುತ್ತದೆ ಅಥವಾ ಕಂಪನಿಯ ಹೆಸರಿನಲ್ಲಿ ಆಸ್ತಿಗಳನ್ನು ಹೊಂದಲು ಬಳಸಲಾಗುತ್ತದೆ. ಇದಲ್ಲದೆ, ಇನ್ನಷ್ಟು ಹಣವನ್ನು ವಿವಿಧ ಬೇನಾಮಿ ವ್ಯಕ್ತಿಗಳು/ಕಂಪನಿಗಳ ಹೆಸರಿನಲ್ಲಿ ಚರ/ಸ್ಥಿರ ಆಸ್ತಿಗಳನ್ನು ಖರೀದಿಸಲು ಬಳಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Latest Indian news

Popular Stories