ಸುಳ್ಯ: ಹಾಲಿನ ವಾಹನ ಪಲ್ಟಿ: ಚಾಲಕನಿಗೆ ಗಾಯ

ಸುಳ್ಯ, ಸೆ.11: ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಪಡ್ಪಿನಂಗಡಿಯಲ್ಲಿ ಹಾಲಿನ ಟ್ಯಾಂಕರ್ ಪಲ್ಟಿಯಾಗಿದೆ.

ಅಪಘಾತದಲ್ಲಿ ವಾಹನದ ಚಾಲಕ ಗಾಯಗೊಂಡಿದ್ದಾನೆ.

ನಂದಿನಿ ಹಾಲಿನ ಟ್ಯಾಂಕರ್ ಎಡಮಂಗಲ, ಯೇನೆಕಲ್ಲು ಮತ್ತು ಪಂಜದ ಬಿಎಂಸಿಯಿಂದ ಹಾಲನ್ನು ಸಂಗ್ರಹಿಸಿ ಡೇರಿಗೆ ಸಾಗಿಸುತ್ತಿತ್ತು. ಟ್ಯಾಂಕರ್ ಪಡ್ಪಿನಂಗಡಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಬಿದ್ದಿದೆ.

ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟ್ಯಾಂಕರ್‌ನಲ್ಲಿದ್ದ ಹಾಲು ಸುರಕ್ಷಿತವಾಗಿದ್ದು, ಟ್ಯಾಂಕರ್‌ನಿಂದ ಹೊರ ಚೆಲ್ಲಿಲ್ಲ ಎನ್ನಲಾಗಿದೆ.

Latest Indian news

Popular Stories