ಹಾಸನ ಲೈಂಗಿಕ ಹಗರಣ: ಯಾವುದೇ ಸರ್ಕಾರದ ಹಸ್ತಾಕ್ಷೇಪ ಇಲ್ಲದೆ ಈ ಪ್ರಕರಣ ತನಿಖೆಯಾಗುತ್ತೆ – ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಹಾಸನದಲ್ಲಿ (Hassan) ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್ (Dr G Parameshwar), ಸರ್ಕಾರ ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಇನ್ನು ಕೆಲವೇ ಹೊತ್ತಲ್ಲಿ ಅಧಿಕೃತವಾಗಿ ಎಸ್​ಐಟಿ ರಚನೆಯಾಗುತ್ತೆ (SIT Team). ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ SIT ತನಿಖೆ ನಡೆಸುತ್ತೇವೆ, ಮಹಿಳಾ ಆಯೋಗದಿಂದ (Women’s Commission) ಬಂದಿರುವ ಪತ್ರದ ಹಿನ್ನೆಲೆಯಲ್ಲಿ ತನಿಖೆಗೆ ಸೂಚಿಸಿದ್ದೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿರುವ ಬಗ್ಗೆ ಮಾಹಿತಿ ಇದೆ. ಸಂತ್ರಸ್ತ ಮಹಿಳೆಯರನ್ನು ಮಹಿಳಾ ಆಯೋಗ ಸಂಪರ್ಕಿಸುತ್ತಿದ್ದಾರೆ ಎಂದು ಹೇಳಿದೆ, ಎಸ್​ಐಟಿ ರಚನೆಯಾದ ಮೇಲೆ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ಕೊಟ್ಟು ತನಿಖೆ ಮಾಡುತ್ತೇವೆ. ಯಾವುದೇ ಸರ್ಕಾರದ ಹಸ್ತಾಕ್ಷೇಪ ಇಲ್ಲದೆ ಈ ಪ್ರಕರಣ ತನಿಖೆಯಾಗುತ್ತೆ. ಪ್ರಜ್ವಲ್ ರೇವಣ್ಣಗೆ ನೋಟಿಸ್ ಕೊಡುವ ವಿಚಾರ ಎಸ್​ಐಟಿ ಅಧಿಕಾರಿಗಳಿಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.


Latest Indian news

Popular Stories