ಮಳೆಗಾಲದಲ್ಲಿ ಭಾರೀ ಮಳೆ ಸಾಧ್ಯತೆ: ಕರ್ನಾಟಕ ಕರಾವಳಿಗೆ ಹಲವು ಮುನ್ನೆಚ್ಚರಿಕೆಗಳು – ಈ ವರದಿ ಓದಿ

ಕಂದಾಯ ಇಲಾಖೆ ಭಾರತೀಯ ಹವಾಮಾನ ಇಲಾಖೆ 2024ರ ಮುಂಗಾರು ಅವಧಿ (ಜೂನ್‌-ಸೆಪ್ಟೆಂಬರ್‌) ಕುರಿತು ನೀಡಿರುವ ಮುನ್ಸೂಚನೆ ಆಧರಿಸಿ ಸುತ್ತೋಲೆಯೊಂದನ್ನು ಹೊರಡಿಸಿದೆ. ಇದರಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಕೆಲವು ಮುನ್ನೆಚ್ಚರಿಕೆ ನೀಡಲಾಗಿದೆ.

ಕರ್ನಾಟಕದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಕರಾವಳಿ ವ್ಯಾಪ್ತಿಗೆ ಸೇರುತ್ತವೆ. ವಾಡಿಕೆಯಂತೆ ಮೂರು ಜಿಲ್ಲೆಗಳಲ್ಲಿ ಮುಂಗಾರು ಅವಧಿಯಲ್ಲಿ ಭಾರೀ ಮಳೆಯಾಗುತ್ತದೆ. ಮೀನುಗಾರಿಕೆ, ಕಡಲ ಕೊರೆತ ಸೇರಿದಂತೆ ಹಲವು ಸೂಚನೆಗಳನ್ನು ಕರಾವಳಿ ಭಾಗದ ಜನರಿಗೆ ನೀಡಲಾಗುತ್ತದೆ.
ಕಂದಾಯ ಇಲಾಖೆ ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಎಲ್ಲಾ ಇಲಾಖೆಗಳು ಮತ್ತು ಜಿಲ್ಲಾ ಮಾಹಿತಿ ಕೇಂದ್ರಕ್ಕೆ ನೈಋತ್ಯ ಮುಂಗಾರು ಎದುರಿಸುವ ಕುರಿತು ಮುನ್ನೆಚ್ಚರಿಕೆಗಳನ್ನು ನೀಡಿದೆ.

ಕರಾವಳಿ ಭಾಗದಲ್ಲಿ ವಿವಿಧ ಸಂಸ್ಥೆಗಳು ನೀಡುವ ಹವಾಮಾನ ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆಗಳನ್ನು ಗಮನಿಸಬೇಕು. ನೈಋತ್ಯ ಮುಂಗಾರು ಸಮಯದಲ್ಲಿ ಸಮುದ್ರ ಪ್ರಕ್ಷುಬ್ಧವಾಗುವ ಸಾಧ್ಯತೆ ಇದ್ದು, ಅಪಾಯಕ್ಕೆ ತುತ್ತಾಗುವಂತಹ ಪ್ರದೇಶಗಳನ್ನು ಗುರುತಿಸುವುದು.

ಮುಂಗಾರು ಚುರುಕಾದಾಗ ಕಡಲ ತೀರಗಳಲ್ಲಿ ಪ್ರವಾಸಿಗರು ಈಜುವುದನ್ನು ಅಥವ ಪ್ರವೇಶಿಸುವುದನ್ನು ತಡೆಯಲು ಕ್ರಮ ಕೈಗೊಳ್ಳುವುದು. ಮುಂಗಾರು ಋತುವಿನಲ್ಲಿ ನಿಗದಿಪಡಿಸಿರುವ ದಿನಗಳಲ್ಲಿ ಮೀನುಗಾರಿಕೆಯನ್ನು ನಿಷೇಧಿಸುವುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಮುಂಗಾರು ಪೂರ್ವದಲ್ಲಿಯೇ ಮುಂಗಾರಿನಲ್ಲಿ ಉದ್ಭವಿಸಬಹುದಾದಂತಹ ವಿಪತ್ತುಗಳಿಂದಾಗುವ ಅಪಾಯಗಳ ಕುರಿತು ಅರಿವು ಮೂಡಿಸುವುದು. ಅಪಾಯಗಳ ಕುರಿತು ಜನರಿಗೆ ಸೂಕ್ತ ಮಾಹಿತಿ ನೀಡಿ ಅರಿವು ಮೂಡಿಸಬೇಕು.

ವಿವಿಧ ವಿಪತ್ತುಗಳು ಉಂಟಾದ ಸಂದರ್ಭದಲ್ಲಿ ಕೈಗೊಳ್ಳಬಹುದಾದ, ಕೈಗೊಳ್ಳಬಾರದ ಕಾರ್ಯಗಳ ಕುರಿತು ಅರಿವು ಮೂಡಿಸಬೇಕು. ವಿಪತ್ತು ಸಂದರ್ಭದಲ್ಲಿ, ತುರ್ತು ಸಮಯದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂದು ಮಾಹಿತಿ ನೀಡಬೇಕು ಎಂದು ಸಹ ಜನರಿಗೆ ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾಹಿತಿ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪ್ರತಿವರ್ಷವೂ ಸಹ ನೈಋತ್ಯ ಮುಂಗಾರು ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಮೀನುಗಾರಿಕೆ ನಿಷೇಧಿಸಲಾಗುತ್ತದೆ. ಜೂನ್‌ 1 ರಿಂದ ಜುಲೈ 31ರ ತನಕ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಈ ಅವಧಿ ಮೀನುಗಳ ಸಂತೋನೋತ್ಪತ್ತಿಗೆ ಸಹಾಯಕವಾಗಲು ಮೀನುಗಾರಿಕೆ ನಿಷೇಧಿಸಲಾಗುತ್ತದೆ.

ಮುಂಗಾರು ಮಳೆಯ ಅವಧಿಯಲ್ಲಿ ಮಲೆನಾಡು ಪ್ರದೇಶದಲ್ಲಿ ಪ್ರವಾಹ, ಭೂ ಕುಸಿತ ಮುಂತಾದ ಪ್ರಾಕೃತಿಕ ವಿಕೋಪ ಸಂಭವಿಸುತ್ತದೆ. ಕರಾವಳಿ ಪ್ರದೇಶದಲ್ಲಿ ಮುಖ್ಯವಾಗಿ ಕಾಡುವ ಸಮಸ್ಯೆ ಕಡಲ ಕೊರೆತ. ಸಮದ್ರ ತೀರದ ಎಲ್ಲಾ ಭೂ ಭಾಗಗಳು ಈ ಕಡಲ ಕೊರೆತವನ್ನು ಅನುಭವಿಸುತ್ತವೆ.

ಮಳೆಗಾಲದಲ್ಲಿ ವಿದ್ಯುತ್ ಸರಬರಾಜು ಕುರಿತು ಸಹ ವಿಶೇಷ ಗಮನ ನೀಡಬೇಕು. ವಿದ್ಯುತ್ ಸರಬರಾಜಿಗೆ ತೊಂದರೆ ಉಂಟಾಗುವುದನ್ನು ಗಮನದಲ್ಲಿರಿಸಿಕೊಂಡು ವಿದ್ಯುತ್ ಮೂಲ ಸೌಲಭ್ಯಗಳನ್ನು ಬಲಪಡಿಸಬೇಕು. ಯಾವುದೇ ವಿದ್ಯುತ್ ಕಡಿತ/ ತುರ್ತು ಪರಿಸ್ಥಿತಿಗೆ ಹಾಜರಾಗಲು ಮತ್ತು ವಿದ್ಯುತ್ ಸರಬರಾಜನ್ನು ತ್ವರಿತವಾಗಿ ಪುನಃಸ್ಥಾಪಿಸಲು ತ್ವರಿತ ಪ್ರತಿಕ್ರಿಯೆ ತಂಡವನ್ನು ರಚಿಸಬೇಕು ಎಂದು ಸಹ ಕಂದಾಯ ಇಲಾಖೆ ಸುತ್ತೋಲೆಯಲ್ಲಿ ಹೇಳಿದೆ.

Latest Indian news

Popular Stories