ಕೈ ಅಭ್ಯರ್ಥಿ ರಾಜು ಆಲಗೂರಗಿಂತ ಅವರ ಪತ್ನಿಯೇ ಶ್ರೀಮಂತೆ

ವಿಜಯಪುರ : ವಿಜಯಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ, ಅವರು ಸಲ್ಲಿಸಿದ ಆಸ್ತಿ ವಿವರದನ್ವಯ ಅವರಿಗಿಂತ ಅವರ ಧರ್ಮಪತ್ನಿಯೇ ಶ್ರೀಮಂತೆಯಾಗಿದ್ದು ಅವರಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ.

ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡಿವಿಟ್ ಅನ್ವಯ ಅಭ್ಯರ್ಥಿ ರಾಜು ಆಲಗೂರ ಹೆಸರಲ್ಲಿ 5 ಲಕ್ಷ ರೂ. ನಗದು, ಬ್ಯಾಂಕ್ ಠೇವಣಿ, ಹೂಡಿಕೆ, ಎರಡು ವಾಹನ, 5.84 ಲಕ್ಷ ರೂ. ಮೌಲ್ಯದ 80 ಗ್ರಾಂ ಬಂಗಾರ ಸೇರಿದಂತೆ 91,74,326 ರೂ.ಮೌಲ್ಯದ ಚರಾಸ್ತಿ ಹೊಂದಿದ್ದು, ಕೃಷಿ ಭೂಮಿ, ಕೃಷಿಯೇತರ ಭೂಮಿ, ನಿವೇಶನ, ಮನೆ, ವಾಣಿಜ್ಯ ಕಟ್ಟಡ (ಅಪಾರ್ಟ್ಮೆಂಟ್) ಒಳಗೊಂಡಂತೆ ಒಟ್ಟು 4,54,87,500 ರೂ.ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಅವರ ಪತ್ನಿ ಸಾವಿತ್ರಿ ಹಣಮಂತರಾವ ಆಲಗೂರ ಹೆಸರಲ್ಲಿ ಚರಾಸ್ತಿ ರೂಪವಾಗಿ 2 ಲಕ್ಷ ರೂ. ನಗದು, ಹೂಡಿಕೆ, ಠೇವಣಿ, ಮೂರು ವಾಹನ, 230 ಗ್ರಾಂ ಚಿನ್ನ (16.79 ಲಕ್ಷ) ಸೇರಿದಂತೆ 1,67,80,894 ರೂ. ಮೌಲ್ಯದ ಚರಾಸ್ತಿ ಇದೆ.

ಅದೇ ತೆರನಾಗಿ ಕೃಷಿ ಭೂಮಿ, ಕೃಷಿಯೇತರ ಭೂಮಿ, ನಿವೇಶನ, ಹೋಟೆಲ್ ಸೇರಿದಂತೆ ಒಟ್ಟು 6,85,25,000 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಅವರು ನೀಡಿರುವ ಅಫಿಡಿವೆಟ್ನಲ್ಲಿ ಉಲ್ಲೇಖಿಸಿದ್ದಾರೆ.

Latest Indian news

Popular Stories