ಜೆಎನ್ ಯು ವಿವಿ ಚುನಾವಣೆ: ಎಬಿವಿಪಿ ವಿರುದ್ಧ ಯುನೈಟೆಡ್ ಲೆಫ್ಟ್ ವಿದ್ಯಾರ್ಥಿಗಳ ಒಕ್ಕೂಟಕ್ಕೆ ಜಯ; ಎಐಎಸ್ ಎ ಸದಸ್ಯ ಧನಂಜಯ್ ಅಧ್ಯಕ್ಷ

ನವದೆಹಲಿ: ಜವಾಹರ್ ಲಾಲ್ ನೆಹರು ವಿವಿ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಯಲ್ಲಿ ಯುನೈಟೆಡ್ ಲೆಫ್ಟ್ ಎಬಿವಿಪಿ ವಿರುದ್ಧ ಜಯಗಳಿಸಿದೆ. 4 ವರ್ಷಗಳ ಬಳಿಕ ನಡೆದ ಚುನಾವಣೆಯಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್ಎ) ಸಂಘಟನೆಯ ಧನಂಜಯ ಚುನಾವಣೆಯಲ್ಲಿ ಗೆದ್ದಿದ್ದು, ಎಬಿವಿಪಿಯಿಂದ ಸ್ಪರ್ಧಿಸಿದ್ದ ಎದುರಾಳಿ ಉಮೇಶ್ ಸಿ ಅಜ್ಮೀರಾ ವಿರುದ್ಧ 2,598 ಮತಗಳನ್ನು ಪಡೆದಿದ್ದಾರೆ ಪರಾಜಿತ ಅಭ್ಯರ್ಥಿ 1,676 ಮತಗಳನ್ನು ಪಡೆದಿದ್ದಾರೆ.

ಎಸ್ ಎಫ್ಐ ನ ಅವಿಜಿತ್ ಘೋಷ್ ಎಬಿವಿಪಿಯ ದೀಪಿಕಾ ಶರ್ಮಾ ವಿರುದ್ಧ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಬಿಎಪಿಎಸ್ಎ ಅಭ್ಯರ್ಥಿ ಪ್ರಿಯದರ್ಶಿನಿ ಆರ್ಯ ಎಡಪಕ್ಷಗಳ ಬೆಂಬಲದೊಂದಿಗೆ ಗೆದ್ದಿದ್ದು, ಎಬಿವಿಪಿಯ ಅರ್ಜುನ್ ಆನಂದ್ ಅವರನ್ನು ಮಣಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ABVP ಯಿಂದ ತನ್ನ ಅಭ್ಯರ್ಥಿ ಸ್ವಾತಿ ಸಿಂಗ್ ಅವರ ಉಮೇದುವಾರಿಕೆಯನ್ನು ಪ್ರಶ್ನಿಸಿದಾಗ ಚುನಾವಣಾ ಸಮಿತಿಯು ಆರ್ಯ ಅವರ ನಾಮನಿರ್ದೇಶನವನ್ನು ರದ್ದುಗೊಳಿಸಿದ ನಂತರ ಯುನೈಟೆಡ್ ಲೆಫ್ಟ್ ಆರ್ಯ ಅವರಿಗೆ ಬೆಂಬಲವನ್ನು ನೀಡಿತು. ಎಡಪಕ್ಷದ ಮೊಹಮ್ಮದ್ ಸಾಜಿದ್ ಅವರು ಎಬಿವಿಪಿಯ ಗೋವಿಂದ್ ಅವರನ್ನು ಸೋಲಿಸುವ ಮೂಲಕ ಜಂಟಿ ಕಾರ್ಯದರ್ಶಿ ಸ್ಥಾನವನ್ನು ಗೆದ್ದಿದ್ದಾರೆ.

Latest Indian news

Popular Stories