ಖಾನ್​ ಮತ್ತು ಕಪೂರ್​ಗಳನ್ನು ಕೆಣಕಿದ ಕಂಗನಾ | ಭಾಷಣಗಳಲ್ಲಿ ಬಿಜೆಪಿಗೆ ಮುಜುಗರ ಸೃಷ್ಟಿಸುತ್ತಿರುವ ವಿವಾದಿತ ನಟಿ!

ನಟಿ ಕಂಗನಾ ರಣಾವತ್ (Kangana Ranaut) ಇದ್ದಲ್ಲಿ ವಿವಾದಗಳು ಇದ್ದೇ ಇರುತ್ತವೆ. ಈಗ ಅವರು ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಹಾಗಾಗಿ ಸಹಜವಾಗಿಯೇ ವಿವಾದಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಅವರು ಅಮಿತಾಭ್​ ಬಚ್ಚನ್​ (Amitabh Bachchan) ಬಗ್ಗೆ ನೀಡಿದ್ದ ಒಂದು ಹೇಳಿಕೆಗೆ ಜನರಿಂದ ವಿರೋಧ ವ್ಯಕ್ತವಾಗಿತ್ತು. ‘ಚಿತ್ರರಂಗದಲ್ಲಿ ಅಮಿತಾಭ್​ ಬಚ್ಚನ್​ ಬಳಿಕ ಅತಿ ಹೆಚ್ಚು ಗೌರವ ಸಿಕ್ಕಿದ್ದು ನನಗೆ’ ಎಂದು ಕಂಗನಾ ಹೇಳಿದ್ದರು. ಅದನ್ನು ನೆಟ್ಟಿಗರು ಒಪ್ಪಿಕೊಂಡಿಲ್ಲ. ಈಗ ಕಂಗನಾ ಮತ್ತೆ ತಕರಾರು ತೆಗೆದಿದ್ದಾರೆ. ಈ ವಾದದಲ್ಲಿ ಖಾನ್​ ಮತ್ತು ಕಪೂರ್​ ಫ್ಯಾಮಿಲಿಯ ನಟ-ನಟಿಯರನ್ನು ಕೂಡ ಕೆಣಕಿದ್ದಾರೆ.

ಇಡೀ ದೇಶಕ್ಕೆ ಅಚ್ಚರಿ ಆಗಿದೆ. ನಾನು ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ, ಮಣಿಪುರ ಎಲ್ಲಿಗೇ ಹೋದರೂ ಭರಪೂರ ಪ್ರೀತಿ ಮತ್ತು ಗೌರವ ಸಿಗುತ್ತಿದೆ. ಹಾಗಾಗಿ ಚಿತ್ರರಂಗದಲ್ಲಿ ಅಮಿತಾಭ್​ ಬಚ್ಚನ್​ ಅವರ ಬಳಿಕ ಹೆಚ್ಚು ಪ್ರೀತಿ ಮತ್ತು ಗೌರವ ಪಡೆದ ವ್ಯಕ್ತಿ ನಾನು ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ’ ಎಂದು ಕಂಗನಾ ರಣಾವತ್​ ಹೇಳಿದ್ದರು.

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಕಂಗನಾ ರಣಾವತ್​ ಅವರ ಈ ಹೇಳಿಕೆಯನ್ನು ಅನೇಕರು ಲೇವಡಿ ಮಾಡಿದ್ದರು. ಕಂಗನಾ ಅವರು ತಮ್ಮನ್ನು ತಾವು ಅಮಿತಾಭ್​ ಬಚ್ಚನ್​ಗೆ ಹೋಲಿಸಿಕೊಂಡಿದ್ದನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಅದು ಕಂಗನಾ ಅವರ ಗಮನಕ್ಕೂ ಬಂದಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದ ವಿವಿಧ ರಾಜ್ಯಗಳಲ್ಲಿ ನನ್ನ ಕಲೆ ಮತ್ತು ರಾಷ್ಟ್ರವಾದಿ ಗುಣಕ್ಕೆ ಗೌರವ ಸಿಗುತ್ತಿದೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಕೇವಲ ನನ್ನ ನಟನೆ ಮಾತ್ರವಲ್ಲ, ಮಹಿಳಾ ಸಬಲೀಕರಣಕ್ಕಾಗಿ ನನ್ನ ಕೆಲಸಗಳನ್ನು ಕೂಡ ಜನರು ಹೊಗಳಿದ್ದಾರೆ. ಈ ವಿಚಾರದಲ್ಲಿ ತಕರಾರು ಹೊಂದಿರುವವರಿಗೆ ನಾನೊಂದು ಪ್ರಶ್ನೆ ಕೇಳುತ್ತೇನೆ. ಈ ದೇಶದಲ್ಲಿ ಅಮಿತಾಭ್​ ಬಚ್ಚನ್ ಅವರ ಬಳಿಕ ಅತಿ ಹೆಚ್ಚು ಗೌರವ ಮತ್ತು ಪ್ರೀತಿ ಪಡೆಯುವ ವ್ಯಕ್ತಿ ನಾನು ಅಲ್ಲ ಎಂಬುದಾದರೆ ಮತ್ಯಾರು? ಖಾನ್​ಗಳಾ ಅಥವಾ ಕಪೂರ್​ಗಳಾ? ನಾನು ಕೂಡ ತಿಳಿದುಕೊಳ್ಳಬಹುದು? ನನ್ನನ್ನು ನಾನು ಸರಿಪಡಿಸಿಕೊಳ್ಳುತ್ತೇನೆ’ ಎಂದು ಕಂಗನಾ ಅವರು ಪ್ರತಿಕ್ರಿಯಿಸಿದ್ದಾರೆ.

Latest Indian news

Popular Stories