ಮಲ್ಪೆ: ಮೀನುಗಾರ ದೋಣಿಯಿಂದ ಕೆಳಗೆ ಬಿದ್ದು‌ ಮೃತ್ಯು

ಉಡುಪಿ, ಸೆ.3: ಮಲ್ಪೆ ಮೀನುಗಾರಿಕಾ ಬಂದರಿನಿಂದ ಎರಡು ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯಿಂದ ಜಾರಿ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಆಗಸ್ಟ್ 31ರಂದು ನಡೆದಿದೆ.

ಜಾರ್ಕಂಡ್ ಮೂಲದ ಮನೋಜ್ ಸಾನ್ (32) ಮೃತ ವ್ಯಕ್ತಿ.

ಮೀನು ಹಿಡಿಯುತ್ತಿದ್ದಾಗ ಮನೋಜ್ ಸಮುದ್ರಕ್ಕೆ ಬಿದ್ದಿದ್ದಾನೆ. ಮನೋಜ್ ಜೊತೆಗೆ ಬೋಟ್ ನಲ್ಲಿದ್ದ ಕೀರ್ತನ್ ತಕ್ಷಣ ಸಮುದ್ರಕ್ಕೆ ಧುಮುಕಿ ಮನೋಜ್ ನನ್ನು ಮೇಲಕ್ಕೆ ಕರೆತಂದರು.

ಆದರೆ, ಬಿದ್ದ ರಭಸಕ್ಕೆ ಮನೋಜ್ ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories