
Featured StoryState News
ಪ್ರತಿಭಟನೆಗೆ ಬೆದರಿದ ಬಿಜೆಪಿ: ರಾತ್ರೋ ರಾತ್ರಿ ಉರಿಗೌಡ, ದೊಡ್ಡನಂಜೇಗೌಡ ಹೆಸರಿನ ಮಹಾದ್ವಾರ ಬದಲಾವಣೆ!
ನೆಲೆ ಇಲ್ಲದ ಮಂಡ್ಯದಲ್ಲಿ ಬಿಜೆಪಿ ಹಿಂದುತ್ವ ಅಜೆಂಡಾ ಮೂಲಕ ಬೇರೂರಲು ಪ್ರಯತ್ನಿಸುತ್ತಿರುವ ಕೇಸರಿಪಾಳೇಯ ಟಿಪ್ಪು ಕೊಂದರು ಎನ್ನಲಾದ ಉರಿಗೌಡ, ದೊಡ್ಡನಂಜೇಗೌಡ ಅವರ ಹೆಸರಿನಲ್ಲಿ ಮಹಾದ್ವಾರವನ್ನು ಮೈಷುಗರ್ ವೃತ್ತದಲ್ಲಿ ಅಳವಡಿಸಲಾಗಿತ್ತು.
ಇದರ ವಿರುದ್ಧ ಪ್ರಗತಿಪರ ಸಂಘಟನೆಗಳು, ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಸಿಐಟಿಯು ಸಂಘಟನೆಗಳು ವಿರೋಧಿಸಿದ್ದವು. ಅಲ್ಲದೆ, ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದವು. ಇದಕ್ಕೆ ಬೆದರಿದ ಬಿಜೆಪಿ ರಾತ್ರೋ ರಾತ್ರಿ ಉರಿಗೌಡ, ನಂಜೇಗೌಡ ಮಹಾದ್ವಾರ ತೆರವುಗೊಳಿಸಿ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ಎಂದು ಅಳವಡಿಸಲಾಗಿದೆ.




