ಮಿಚಾಂಗ್ ಚಂಡಮಾರುತ: ತಮಿಳು ನಾಡಿನಲ್ಲಿ ಮೃತರ ಸಂಖ್ಯೆ 17ಕ್ಕೆ ಏರಿಕೆ, ವಾಯು ಸಮೀಕ್ಷೆ, ತಗ್ಗಿದ ಮಳೆಯ ಅಬ್ಬರ

ಚೆನ್ನೈ: ಮಿಚಾಂಗ್ ಚಂಡಮಾರುತವು ಇಂದು ಬುಧವಾರ ಹೊತ್ತಿಗೆ ಆಂಧ್ರ ಪ್ರದೇಶದ ಮಧ್ಯ ಕರಾವಳಿಯ ಆಳವಾದ ಭಾಗದಲ್ಲಿ ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮಿಚಾಂಗ್ ಚಂಡಮಾರುತ ಆಂಧ್ರ ಪ್ರದೇಶದ ಕೇಂದ್ರ ಕರಾವಳಿ ಮೇಲೆ ಆಳವಾದ ಕುಸಿತವಾಗಿ ದುರ್ಬಲಗೊಂಡಿದೆ. ಬಾಪಟ್ಲಾದಿಂದ ಸುಮಾರು 100 ಕಿಮೀ ಉತ್ತರ-ವಾಯುವ್ಯ ಮತ್ತು ಖಮ್ಮಮ್‌ನಿಂದ ಆಗ್ನೇಯಕ್ಕೆ 50 ಕಿ.ಮೀ ದೂರದಲ್ಲಿ ಚಂಡಮಾರುತ ಇಳಿಕೆಯಾಗಿದೆ. ಮುಂದಿನ 12 ಗಂಟೆಗಳಲ್ಲಿ ಮತ್ತಷ್ಟು ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನಿನ್ನೆ ಮಂಗಳವಾರ ಮಿಚಾಂಗ್ ಚಂಡಮಾರುತವು ಭೂಮಿಗೆ ಅಪ್ಪಳಿಸಿ ಚೆನ್ನೈನಲ್ಲಿ ನಿರಂತರ ಭಾರೀ ಮಳೆಗೆ ಕಾರಣವಾಗಿ ಪ್ರವಾಹ ಉಂಟಾಯಿತು. ಸೋಮವಾರದಿಂದ ತೀವ್ರತೆ ಕಡಿಮೆಯಾದರೂ ನಿನ್ನೆ ಮಳೆಯ ಅಬ್ಬರ ಮುಂದುವರಿದು ತಮಿಳು ನಾಡಿನ ರಾಜಧಾನಿಯನ್ನು ಚೆನ್ನೈ ನಿವಾಸಿಗಳ ಜನಜೀವನವನ್ನು ಸ್ಥಗಿತಗೊಳಿಸಿತು.

Latest Indian news

Popular Stories