Featured StoryNational

ಉ.ಪ್ರ: ವ್ಯಕ್ತಿಯ ಮೇಲೆ ಗಂಪು ಹಲ್ಲೆ, ರಕ್ಷಣೆಗೆ ಬಂದ ಸಹೋದರಿ

ಮೀರತ್: ತನ್ನ ಸಹೋದರಿಯ ಶುಲ್ಕವನ್ನು ಕಟ್ಟಲು ಹೋದ ಕಾಲೇಜು ಕ್ಯಾಂಪಸ್‌ನಲ್ಲಿ ಸ್ಕಲ್ ಕ್ಯಾಪ್ ಧರಿಸಿದ್ದಕ್ಕಾಗಿ ಯುವಕನೊಬ್ಬನಿಗೆ ಗುಂಪೊಂದು ಥಳಿಸಿದ ಘಟನೆ ನಡೆದಿರುವ ಕುರಿತು ವರದಿಯಾಗಿದೆ.‌

ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ವೀಡಿಯೊದಲ್ಲಿ, ದುಷ್ಕರ್ಮಿಗಳು ಸಂತ್ರಸ್ಥನ ಕಾಲರ್ ಹಿಡಿದು ಹಲ್ಲೆ ಮಾಡುವ, ನಂತರ ವ್ಯಕ್ತಿ ಕ್ಯಾಪ್ ಅನ್ನು ತೆಗೆಯುವುದನ್ನು ನೋಡಬಹುದು. ಇನ್ನೊಬ್ಬನು ಇಟ್ಟಿಗೆಯನ್ನು ಎತ್ತುವುದು ವೀಡಿಯೊದಲ್ಲಿ ಸೆರೆಯಾಗಿದೆ ಎಂದು ಸಿಯಾಸತ್ ಮಾಧ್ಯಮ ವರದಿ ಮಾಡಿದೆ.

ಪೊಲೀಸರ ಪ್ರಕಾರ, ಸೋಮವಾರ ಲಿಸಾರಿ ಗೇಟ್ ಪ್ರದೇಶದ ನಿವಾಸಿ ಮೊಹಮ್ಮದ್ ಸಾಹಿಲ್ ಶುಲ್ಕ ಕೌಂಟರ್‌ನಲ್ಲಿ ಸರದಿಯಲ್ಲಿ ನಿಂತಿದ್ದಾಗ ಈ ಘಟನೆ ನಡೆದಿದೆ.

ಪೊಲೀಸ್ ದೂರು ದಾಖಲಿಸಿದ ಸಾಹಿಲ್ ಸಹೋದರ ಮೊಹಮ್ಮದ್ ಇಮ್ರಾನ್, “ಸಾಹಿಲ್ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿರುವ ನಮ್ಮ ಸಹೋದರಿ ಜೊತೆಗಿದ್ದರು. ಕೆಲವು ಯುವಕರು ಆಕ್ಷೇಪಾರ್ಹ ಕಮೆಂಟ್ ಮಾಡಿದ್ದಾರೆ. ಅವರ ತಲೆಯ ಟೊಪ್ಪಿಯನ್ನು ಅವರು ಆಕ್ಷೇಪಿಸಿದರು. ಅದನ್ನು ತೆಗೆದುಹಾಕಲು ಒತ್ತಾಯಿಸಿದ್ದಾರೆ ನಂತರ ಅವರು ಅವನಿಗೆ ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದರು. ನಮ್ಮ ಸಹೋದರಿ ಸಹಾಯಕ್ಕಾಗಿ ಕಿರುಚಿಕೊಂಡ ನಂತರವೇ ಅವರು ಓಡಿಹೋದರು” ಎಂದು ಹೇಳಿದ್ದಾರೆ.

ಆದರೆ ಪೊಲೀಸರು ಈ ಪ್ರಕರಣದಲ್ಲಿ ಯಾವುದೇ ಧಾರ್ಮಿಕ ಆಯಾಮ ಇಲ್ಲವೆಂದು ಹೇಳಿದ್ದಾರೆ.

ಪೊಲೀಸ್ ವರಿಷ್ಟಾಧಿಕಾರಿ‌ ಪಿಯೂಷ್ ಈ ಕುರಿತು ಮಾತನಾಡಿ, ” ಸಂತ್ರಸ್ಥ ಮೊಬೈಲ್ ನೋಡುತ್ತಿದ್ದ ಈ ಸಂದರ್ಭದಲ್ಲಿ ಯುವಕರು ತಮ್ಮ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದಾನೆ ಎಂದು ಭಾವಿಸಿ ಹಲ್ಲೆಗೆ ಮುಂದಾಗಿದ್ದಾರೆ” ಎಂದು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button