ಭಾರೀ ಟ್ರಾಫಿಕ್ ಜಾಮ್’ಗೆ ನಲುಗಿದ ಬೆಂಗಳೂರು

ಸೆ.26 ರ ಬಂದ್ ನಂತರ ಬುಧವಾರ ಬೆಂಗಳೂರು ಭಾರೀ ಟ್ರಾಫಿಕ್ ಜಾಮ್’ಗೆ ಸಾಕ್ಷಿಯಾಯಿತು.ಸಣ್ಣ ದೂರ ಕ್ರಮಿಸಲು ಕೂಡ ಗಂಟೆ ಗಟ್ಟಲೇ ರಸ್ತೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾದ ಕುರಿತು ನೆಟ್ಟಿಗರು ತಮ್ಮ ಅನುಭವ X ನಲ್ಲಿ ಹಂಚಿಕೊಂಡಿದ್ದಾರೆ.

ಕೀಲೋ ಮೀಟರ್‌ ವರೆಗೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದ ಪರಿಣಾಮ ಗಂಟೆ ಗಟ್ಟಲೇ ರಸ್ತೆಯಲ್ಲಿ ಕಾದ ವಾಹನ ಸವಾರರು, ಶಾಲಾ ಮಕ್ಕಳು ಹೈರಾಣಾದ ಘಟನೆ ನಡೆದಿದೆ. ಇಂತಹ ಘಟನೆ ನಗರದ ಹೊರ ವರ್ತುಲ ರಸ್ತೆ (ORR) ಮತ್ತಿತರ ಪ್ರಮುಖ ರಸ್ತೆಗಳಲ್ಲಿ ಕಂಡು ಬಂದಿದೆ.

ಮನೆಯಿಂದ ಕಚೇರಿಗಳಿಗೆ ಅಥವಾ ಕಚೇರಿಗಳಿಂದ ಮನೆಗೆ ತೆರಳುವವರು ಮಾರ್ಗದ ಮಧ್ಯೆ ಗಂಟೆಗಳ ಕಾಲ ಸಿಲುಕಿ ತೊಂದರೆ ಅನುಭವಿಸಿದರು. ಕೆಲವರು ರಾತ್ರಿ 9 ಗಂಟೆಯ ಮೊದಲು ಕಚೇರಿಯಿಂದ ಹೊರ ಹೋಗಬೇಡಿ. ಓಆರ್‌ಆರ್, ಮಾರತ್ತಹಳ್ಳಿ, ಸರ್ಜಾಪುರ ಮತ್ತು ಸಿಲ್ಕ್‌ಬೋರ್ಡ್ ಮಾರ್ಗಗಳನ್ನು ಬಳಸದಂತೆ ನೆಟ್ಟಿಗರು ಪೋಸ್ಟ್ ಮಾಡಿದ್ದು ಕಂಡು ಬಂತು.

1.5 ಕ್ರಮಿಸಲು ಬರೊಬ್ಬರಿ ಮೂರು ಗಂಟೆ!

1.5 ಕಿಲೋ ಮೀಟರ್ ಕ್ರಮಿಸಲು ಒಟ್ಟು 3 ಗಂಟೆ ಸಮಯ ಹಿಡಿದಿದ್ದು, ಇದು ಭಯಾನಕ ಸಂಚಾರ ದಟ್ಟನೇ ಎಂದು ಕೆಲವರು ಬರೆದುಕೊಂಡಿದ್ದಾರೆ. ಈ ಮಧ್ಯೆ ಮತ್ತೊಬ್ಬ ಸಾಮಾಜಿಕ ಬಳಕೆದಾರರ/ ವಾಹನ ಸವಾರರು 1 ಕಿಲೋ ಮೀಟರ್ ಕ್ರಮಿಸಲು ಎರಡು ಗಂಟೆ ತೆಗೆದುಕೊಂಡ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಈ ಭಾರೀ ಸಂಚಾರ ದಟ್ಟಣೆಯಿಂದ ಸಂಜೆ ಮನೆ ತಲುಪಬೇಕಿದ್ದ ಮಕ್ಕಳು ಟ್ರಾಫಿಕ್‌ನಲ್ಲಿ ಶಾಲಾ ವಾಹನ ಸಿಲುಕಿದ್ದರಿಂದ ರಾತ್ರಿ 8 ಗಂಟೆಗೆ ಮಕ್ಕಳನ್ನು ಮನೆ ಮುಟ್ಟಿದ್ದಾರೆ.

ಕಾರಣವೇನು?

ಬೆಂಗಳೂರಿನಲ್ಲಿ ಬುಧವಾರದಂದು ಭಾರತ ಪ್ರವಾಸದಲ್ಲಿರುವ ಹಾಸ್ಯನಟ ಟ್ರೆವರ್ ನೋಹ್ ಅವರು ಬೆಂಗಳೂರಿ ಹೊರ ವರ್ತುಲ ರಸ್ತೆಯಲ್ಲಿ ನಡೆಸಬೇಕಿದ್ದ ಪ್ರದರ್ಶನ ರದ್ದುಗೊಳಿಸಿದ್ದರು. ಅವರು ಸಹ ಸುಮಾರು 30 ನಿಮಿಷ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು.

ಹಾಸ್ಯನಟರ ಕಾರ್ಯಕ್ರಮಕ್ಕೆ ಟಿಕೆಟ್ ಖರೀದಿಸಿದ್ದ ಹಲವಾರು ಬೆಂಗಳೂರು ನಿವಾಸಿಗಳು ಹಾಜರಾಗಲು ತಮ್ಮ ಕಛೇರಿಯಿಂದ ಬೇಗ ಹೊರಟಿದ್ದರು. ಇದು ಅವರ ಪ್ರದರ್ಶನಕ್ಕೆ ಹೋಗುವ ORR ನಲ್ಲಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಿತು. ಸ್ಥಳದಲ್ಲಿದ್ದ ಪ್ರಯಾಣಿಕರು 2-3 ಗಂಟೆಗಳ ಕಾಲ ಸಿಲುಕಿಕೊಂಡರು.

ಐಬಿಐ ಸಂಚಾರ ವರದಿಯ ಪ್ರಕಾರ ಸಂಜೆ 7.30ರಿಂದ ರಾತ್ರಿವರೆಗೆ ಸುಮಾರು 1.5 ಲಕ್ಷದಿಂದ 2 ಲಕ್ಷ ವರೆಗೆ ಓಡಾಡಬೇಕಿದ್ದ ವಾಹನಗಳ ಸಂಖ್ಯೆ 3.59 ಲಕ್ಷ ವಾಹನಗಳಿಗೆ ಏರಿಕೆ ಆಗಿತ್ತು. ಇದು ಸಹ ಟ್ರಾಫಿಕ್ ಏರಿಕೆಗೆ ಕಾರಣವಾಯಿತು. ಇನ್ನೂ ಆಗಾಗ ಬರುವ ಮಳೆಗೆ ವಿವಿಧ ಒಳ ರಸ್ತೆಗಳೆಲ್ಲ ಜಲಾವೃತಗೊಂಡ ಮಧ್ಯಾಹ್ನ 3ಗಂಟೆ ನಂತರ ವಿವಿಧೆ ವಾಹನಗಳು ಸಿಲುಕಿಕೊಂಡವು.

Latest Indian news

Popular Stories