Featured Story

ಬಿಗ್ ಸ್ಟೋರಿ: ಪೆಗಾಸಸ್ ಹಗರಣದ ಆರೋಪ ಸರಿಯಾಗಿದ್ದರೆ ಇದೊಂದು ಗಂಭೀರ ವಿಚಾರ – ಸುಪ್ರೀಮ್ ಕೋರ್ಟ್

ನವದೆಹಲಿ: ಪೆಗಾಸಸ್ ಸ್ಪೈವೇರ್ ಸಾಫ್ಟ್‌ವೇರ್ ಹಗರಣದ ಕುರಿತು ಇಂದು ಸರ್ವೊಚ್ಚ ನ್ಯಾಯಾಲಯ ಇಂದು ವಿಚಾರಣೆ ನಡೆಸುತ್ತಿದೆ. ಈ ಕುರಿತು ಪ್ರಾಥಮಿಕ ಅಭಿಪ್ರಾಯ ತಿಳಿಸಿದ ಸರ್ವೊಚ್ಚ ನ್ಯಾಯಾಲಯ ಒಂದು ವೇಳೆ ಆರೋಪ ಸರಿಯಾಗಿದ್ದರೆ ಇದೊಂದು ಗಂಭೀರ ವಿಚಾರವೆಂದು ತಿಳಿಸಿದೆ.

ಎಡಿಟರ್ಸ್ ಗೀಲ್ಡ್ ಇಂಡಿಯಾ ವಿಶೇಷ ತನಿಖೆಗೆ ಕೋರಿ ಸರ್ವೊಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ಸ್ಪೈವೇರ್ ಸಾಫ್ಟ್‌ವೇರ್ ನಿಂದ ವಿರೋಧ ಪಕ್ಷ ನಾಯಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ರಹಸ್ಯವಾಗಿ ಮೊಬೈಲ್ ಗಳನ್ನು ಗುರಿಯಾಗಿಸಿ ಕಾರ್ಯಚರಿಸಲಾಗಿತ್ತು. ನಂತರ ದಿ ವೈರ್ ಪತ್ರಿಕೆ ಈ ಕುರಿತು ವಿಸ್ತೃತವಾದ ವರದಿ ಪ್ರಕಟಿಸಿತ್ತು.

ಇದೀಗ ಸರ್ವೊಚ್ಚ ನ್ಯಾಯಾಲಯದ ನ್ಯಾ.ಎನ್ ವಿ ರಮಣ ಸೇರಿದಂತೆ ಇಬ್ಬರ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button