ನಾನು ಸನಾತನ‌ ಧರ್ಮದ ಬಗ್ಗೆ ತಪ್ಪು ಅರ್ಥ ಬರುವ ರೀತಿಯಲ್ಲಿ ಮಾತನಾಡಿಲ್ಲ; ಬೇರೆಯವರ ವಿಶ್ಲೇಷಣೆಗೆ ಉತ್ತರ ಕೊಡಲ್ಲ – ಪರಮೇಶ್ವರ್

ಹುಬ್ಬಳ್ಳಿ: ನಾನು ಸನಾತನ‌ ಧರ್ಮದ ಬಗ್ಗೆ ತಪ್ಪು ಅರ್ಥ ಬರುವ ರೀತಿಯಲ್ಲಿ ಮಾತನಾಡಿಲ್ಲ. ಬೇರೆಯವರು ಏನು ವಿಶ್ಲೇಷಣೆ ಮಾಡುತ್ತಾರೆ ಅದಕ್ಕೆಲ್ಲ ಉತ್ತರ ಕೊಡಲ್ಲ. ನಾನು ಸಮಯ, ಸಂದರ್ಭದಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ ಎಂದು ಗೃಹ ಸಚಿವ ಡಾ. ಜಿ‌. ಪರಮೇಶ್ವರ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅಭಿಪ್ರಾಯ ಹೇಳಿದ್ದೇನೆ. ಯಾರು ಏನು ಬೇಕಾದರೂ ವಿಶ್ಲೇಷಣೆ ಮಾಡಲಿ. ಅವರು ಹಾಗೆ ಮಾತನಾಡುತ್ತಾರೆ. ಹೀಗೆ ಮಾತನಾಡುತ್ತಾರೆ ಅಂದರೆ ನಾನು ಉತ್ತರ ಕೊಡಲ್ಲ. ಪ್ರಧಾನಿ ಮೋದಿ ಅವರು ನಾನು ಹೇಳಿರೋ ಹೇಳಿಕೆ ಬಗ್ಗೆ ಮಾತನಾಡಿಲ್ಲ. ಸನಾತನ ಧರ್ಮದ ವಿಚಾರವಾಗಿ ಮಾತನಾಡಿದ್ದಾರೆ ಎಂದರು

ಬಿಜೆಪಿಯವರು ಹೋರಾಟ ಮಾಡಲಿ ನಾವು ಪ್ರತ್ಯುತ್ತರ ಕೊಡುತ್ತೇವೆ. ಈಗಾಗಲೇ ಜನ ಉತ್ತರ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನ ಉತ್ತರ ಕೊಡುತ್ತಾರೆ ಎಂದರು.

ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಬಿಜೆಪಿಯವರಿಗೆ ಏನು ಬೇರೆ ಇದೇಯಾ ಎಂದು ಪ್ರಶ್ನಿಸಿದರು.

ಬರಗಾಲದ ಬಗ್ಗೆ ಸಂಪುಟ ಸಭೆಯಲ್ಲಿ ನಲ್ಲಿ ಚರ್ಚೆಯಾಗಿದೆ. ಶೀಘ್ರವೇ ಬರಗಾಲ ಘೋಷಣೆ ಮಾಡಲಾಗವುದು. ಜೊತೆಗೆ ಕೇಂದ್ರಕ್ಕೂ ವರದಿ ಕಳಿಸುತ್ತೇವೆ ಎಂದರು.

ಗದಗನಲ್ಲಿ ಹೊಸದಾಗಿ ಕಮಾಂಡೋ ಸೆಂಟರ್ ಮಾಡಿದ್ದಾರೆ. ಹೀಗಾಗಿ ಗದಗ ಹೋಗುತ್ತಿದ್ದೇನೆ ಎಂದರು.

Latest Indian news

Popular Stories