ಸುಬ್ರಹ್ಮಣ್ಯ- ಮಂಗಳೂರು ರೈಲು ಸಮಯ ಬದಲಾವಣೆ

ಬೆಂಗಳೂರು : ಪ್ರತೀ ದಿನ ಮಧ್ಯಾಹ್ನ ಸುಬ್ರಹ್ಮಣ್ಯದಿಂದ ಹೊರಡುವ ಸುಬ್ರಹ್ಮಣ್ಯ ರೋಡ್ – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಸಮಯವನ್ನು ಪರಿಷ್ಕರಿಸಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದ್ದು, ಡಿ.6ರಿಂದ ಜಾರಿಗೊಂಡಿದೆ.

ಮಧ್ಯಾಹ್ನ 1.30ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣ ದಿಂದ ಹೊರಡುತ್ತಿದ್ದ ರೈಲು ಮಧ್ಯಾಹ್ನ 3.03 ಗಂಟೆಗೆ ಬಂಟ್ವಾಳ ನಿಲ್ದಾಣ ತಲುಪುತ್ತದೆ ಎಂಬುದು ಈ ಹಿಂದಿನ ಸಮಯವಾಗಿದ್ದರೂ, ಬಹುತೇಕ ಸಂದರ್ಭದಲ್ಲಿ ರೈಲು 2.50ರ ಹೊತ್ತಿಗೆ ಬಂಟ್ವಾಳ ತಲುಪುತ್ತಿತ್ತು.
ಡಿ.6ರಿಂದ ಜಾರಿಯಾದ ಹೊಸ ವೇಳಾಪಟ್ಟಿಯ ಪ್ರಕಾರ ಮಧ್ಯಾಹ್ನ 1.45 ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣದಿಂದ ಮಂಗಳೂರು ರೈಲು ಹೊರಡಲಿದೆ. ಬಜಕೆರೆ ವೇಳಾಪಟ್ಟಿ ನಿಲ್ದಾಣದಿಂದ 1.54, ಕೋಡಿಂಬಾಳದಿಂದ 2.01, ಎಡಮಂಗಲದಿಂದ 2.09, ಕಾಣಿಯೂರಿನಿಂದ 2.19, ನರಿಮೊಗರುವಿನಿಂದ 2.31, ಕಬಕ ಪುತ್ತೂರಿನಿಂದ ಹೀಗಿದೆ 2.47, ನೇರಳಕಟ್ಟೆಯಿಂದ 3.02 ಮತ್ತು ಬಂಟ್ವಾಳದಿಂದ 3.22ಕ್ಕೆ ಹೊರಡಲಿದೆ.

Latest Indian news

Popular Stories