ಸಿಕ್ಕಿಂ ಹಠಾತ್ ಪ್ರವಾಹ: 23 ಯೋಧರು ನಾಪತ್ತೆ

ಸಿಕ್ಕಿಂನಲ್ಲಿ ತಲೆದೋರಿದ ಹಠಾತ್ ಪ್ರವಾಹದ ನಂತರ 23 ಸೇನಾ ಯೋಧರು ನಾಪತ್ತೆಯಾಗಿದ್ದಾರೆ.

ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಬಳಿ ಹಠಾತ್ ಮೋಡ ಸ್ಪೋಟದಿಂದ ಲಾಚೆನ್ ಕಣಿವೆಯ ತೀಸ್ತಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಕಣಿವೆಯಲ್ಲಿನ ಕೆಲವು ಸೇನಾ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ. ಚುಂಗ್‌ತಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡುವುದರಿಂದ, ನೀರಿನ ಮಟ್ಟವು ಇದ್ದಕ್ಕಿದ್ದಂತೆ 15-20 ಅಡಿ ಎತ್ತರಕ್ಕೆ ಏರಿದ್ದು, ಸಿಕ್ಕಿಂನ ಅನೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಸಿಂಗ್ಟಾಮ್ ಬಳಿಯ ಬರ್ದಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳು ಪ್ರವಾಹಕ್ಕೆ ಸಿಲುಕಿದ್ದು, 23 ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದಲ್ಲದೇ ಕೆಲ ವಾಹನಗಳು ಕೆಸರಿನಲ್ಲಿ ಹೂತು ಹೋಗಿರುವ ಬಗ್ಗೆಯೂ ವರದಿಯಾಗಿದೆ.

Latest Indian news

Popular Stories