ಮಂಗಳೂರು : ಸರ ಕದ್ದು ಪರಾರಿ- ಐವರ ಬಂಧನ

ಮಂಗಳೂರು: ಕೊಳ್ನಾಡುವಿನಲ್ಲಿ ಈಚೆಗೆ ನಡೆದಿದ್ದ ದರೋಡೆ ಹಾಗೂ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಮೂಲ್ಕಿ ಠಾಣೆಯ ಪೊಲೀಸರು ಬಂಧಿಸಿದ್ದು, ಅವರಿಂದ ಚಿನ್ನಾಭರಣಗಳ ಸಹಿತ ಒಟ್ಟು 7.63 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ದಾವಣಗೆರೆಯ ಹೊನ್ನೂರಿನ ರಘು (30), ವಿನೋಬ ನಗರದ ಪ್ರಮೋದ್ (23), ಆವರಗೆರೆ ಗೋಶಾಲೆ ಬಳಿಯ ಎಚ್. ರವಿಕಿರಣ್ (23) ಆವರಗೆರೆಯ ದಾವಲ ಸಾಬ್ (25), ಬಾಪೂಜಿ ಬಡಾವಣೆಯ ಮಂಜುನಾಥ ( 29) ಇವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಳ್ನಾಡು ಚಂದ್ರಮೌಳೇಶ್ವರ ರಸ್ತೆಯ ಬಳಿಯ ಮನೆಗೆ ಸೆ.17 ರಂದು ಖಾಲಿ ಬಾಟಲಿ ಕೇಳುವ ನೆಪದಲ್ಲಿ ಬಂದಿದ್ದ ನಾಲ್ವರು ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಅದೇ ದಿನ ಚಂದ್ರಮೌಳೇಶ್ವರ ರಸ್ತೆ ಬಳಿಯ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿ ವ್ಯಕ್ತಿಯೊಬ್ಬರು ನಿಲ್ಲಿಸಿದ್ದ ಬೈಕ್‌ ಕಳವಾಗಿತ್ತು. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳಿಂದ ಬಜಾಜ್‌ ಡಿಸ್ಕವರ್‌ ಬೈಕ್‌, ಹೋಂಡ ಡ್ರೀಮ್‌ ಯುಗ ಬೈಕ್‌, ರಾಯಲ್‌ ಎನ್‌ಫೀಲ್ಡ್‌ ಬೈಕ್‌, ಇಟಿಯೋಸ್‌ ಟೂರಿಸ್ಟ್‌ ಕಾರು, 39.67 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories