ಉಡುಪಿ: ಇಂದ್ರಾಳಿ ಬ್ರಿಡ್ಜ್ ಮತ್ತು ರಸ್ತೆಯ ಅವ್ಯವಸ್ಥೆ ಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ,”ಮೊದಲು ಇಂದ್ರಾಳಿ ಬ್ರಿಡ್ಜ್ ನ ಬಳಿಯಲ್ಲಿ ಕೆಳಗೆ ಇಳಿದು ಕೂಡಲೇ ಮೇಲೆ ಬರುವುದು ಸುಲಭವಾಗಿತ್ತು,ಈಗ 1 ಕಿ ಮಿ ದೂರದವರೆಗೆ ಕಿರಿದಾದ ಒಂದೇ ರಸ್ತೆಯಲ್ಲಿ ಎರಡು ದಿಕ್ಕುಗಳಲ್ಲಿ ಸಾಗುವುದು ತುಂಬಾ ಅನಾನುಕೂಲ.ದಾರಿಯುದ್ದಕ್ಕೂ ಅಲ್ಲಲ್ಲಿ ಅಡ್ಡಾದಿಡ್ಡಿ ಬೃಹತ್ ಸಿಮೆಂಟ್ ಕಲ್ಲಿನ ಕೃತಕ ಡಿವೈಡರ್ ಗಳು,ಪ್ರತಿದಿ ಅಪಘಾತಗಳು ಮಾಮೂಲು.
ಕಾರಿಗೆ ಹಾನಿ,ಬೈಕ್ ಗೆ ಹಾನಿ,ಲಾರಿಗಳು ಡಿವೈಡರ್ ಗೆ ಗುದ್ದಿ ಟೈರ್ ಪಂಕ್ಚರ್ ಆಗುವುದು,ಹೆಂಗಸರು ದ್ವಿಚಕ್ರದಿಂದ ಬಿದ್ದು ಮೂರ್ಛೆ ಹೋಗುವುದು,ವಿದ್ಯಾರ್ಥಿಗಳು ಬಿದ್ದು ರಕ್ತ ಒರೆಸಿಕೊಂಡು ಹೋಗುವುದು,ಅಲ್ಲಲ್ಲಿ ಸಿಟಿ ಬಸ್ ತಕ್ಷಣ ನಿಲ್ಲುವುದರಿಂದ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಗಳಲ್ಲಿದ್ದ ಮಕ್ಕಳು ಉದುರಿ ಬೀಳುವುದು ಇಲ್ಲಿ ನಾವು ನೋಡಿದ ಘಟನೆಗಳು,ಇದರಿಂದಾಗಿ ಕಳೆದ ಕೆಲ ವರ್ಷಗಳಿಂದ ಉಡುಪಿ ಜನತೆ ಕಷ್ಟ ನಷ್ಟಗಳನ್ನು ಅನುಭವಿಸಿದ್ದಾರೆ.
ಬ್ರಿಡ್ಜ್ ನಿರ್ಮಿಸುವುದು ಯಾವಾಗಲೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ,ಕೊನೆಯ ಪಕ್ಷ ಮೊದಲಿನ ತರಹವಾದರೂ ಬ್ರಿಡ್ಜ್ ನ ಬಳಿ ಇಳಿದು ಪುನಃ ಮೇಲೆ ಬಂದು ಮುಂದೆ ಸಾಗಿದರೆ ಎಷ್ಟೋ ಜೀವಹಾನಿ ತಡೆಯಬಹುದು ದಯವಿಟ್ಟು ತಾವುಗಳು ಈ ತೊಂದರೆಯನ್ನು ಸರಿ ಪಡಿಸಿದರೆ ಮುಂದೆ ಆಗಬಹುದಾದ ಅವಘಢಗಳನ್ನು ತಡೆಯಬಹುದು.
ಈ ಮೇಲಿನ ಮನವಿಯನ್ನು ಇಂದು ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳಿಗೆ ಹಾಗೂ ಎಸ್ ಪಿ ( ಪೋಲಿಸ್ ವರಿಷ್ಠಾಧಿಕಾರಿ) ಯವರಿಗೆ ಭೇಟಿ ಆಗಿ ನೀಡಿ ಅಲ್ಲಿ ಶಾಲೆ,ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ ಹಾಗೂ ಮಸೀದಿ ಇತ್ಯಾದಿಗಳೂ ಇದ್ದು ಶೀಘ್ರವಾಗಿ ಸಮಸ್ಯೆ ಪರಿಹರಿಸುವಂತೆ ಕೋರಿಕೊಂಡಿದ್ದು ಜತೆ ಸ್ಥಳೀಯರು ಇದ್ದರು, ಸಮಸ್ಯೆ ಹೇಗೆ ಪರುಹರಿಸಬಹುದೆಂಬ ಅಂದಾಜು ನಕ್ಷೆಯೊಂದನ್ನೂ ಲಗ್ತೀಕರಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
DC ,SP ಇಬ್ಬರೂ ವಿಷಯವನ್ನು ಅರಿತು ಕೆಲದಿನಗಳಲ್ಲಿ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವುದಾಗಿ ಕಾಂಗ್ರೆಸ್ ವಕ್ತಾರ ಅಮೃತ್ ಶೆಣೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.