ಗುಜರಾತ್ ಗೆ ನೀಡಿರುವ ಯೋಜನೆಗಳನ್ನು ನಮಗೂ ನೀಡಬೇಕು- ಡಿಸಿಎಂ ಡಿಕೆ ಶಿವಕುಮಾರ್

ನವದೆಹಲಿ: ಕೇಂದ್ರ ಸರ್ಕಾರ ಗುಜರಾತಿಗೆ ನೀಡಿರುವ ನೀತಿಗಳು, ಯೋಜನೆಗಳನ್ನು ನಮಗೂ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಜಂತರ್ ಮಂತರ್ ನಲ್ಲಿಂದು ಕರ್ನಾಟಕ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಾವು ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ, ನಾವು ಪಡೆಯಬೇಕಾದ ಶೇ. 13 ರಷ್ಟು ತೆರಿಗೆ ಪಾಲನ್ನು ಪಡೆದರೆ ಇತರ ರಾಜ್ಯಗಳಿಗೆ ಲಾಭವಾದರೂ ನನಗೆ ಅಭ್ಯಂತರವಿಲ್ಲ. ಕೇಂದ್ರ ಸರ್ಕಾರ ಗುಜರಾತ್‌ಗೆ ನೀಡಿದ ನೀತಿಗಳು ಯೋಜನೆಗಳನ್ನು ನಮಗೂ ನೀಡಬೇಕು ಎಂದು ಆಗ್ರಹಿಸಿದರು.

ಈ ಪ್ರತಿಭಟನೆಯು ‘ನಮ್ಮ ತೆರಿಗೆಗಳು, ನಮ್ಮ ಹಕ್ಕುಗಳು’; ‘ನಮ್ಮ ಆದಾಯ, ನಮ್ಮ ಹಕ್ಕು ಆಗಿದೆ. ತೆರಿಗೆ ಕಟ್ಟಿರುವ ನಮ್ಮ ಮಕ್ಕಳು, ಪುರುಷರು ಮತ್ತು ಮಹಿಳೆಯರಿಗಾಗಿ ಕೇಂದ್ರದಿಂದ ನ್ಯಾಯಯುತವಾಗಿ ತೆರಿಗೆ ಹಂಚಿಕೆಯಲ್ಲಿ ಪಾಲು ಕೇಳುತ್ತಿದ್ದೇವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸರಿಯಾದ ಪಾಲು ದೊರೆಯಬೇಕು ಎಂದು ಒತ್ತಾಯಿಸಿದರು.

Latest Indian news

Popular Stories