ಟರ್ಕಿ ಸಂಸತ್ತಿನ ಬಳಿ ಸ್ಫೋಟ: ‘ಭಯೋತ್ಪಾದಕ ದಾಳಿ’ ಎಂದ ಸರ್ಕಾರ

ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ರವಿವಾರ ಭಾರೀ ಸ್ಫೋಟ ನಡೆದಿದೆ. ಟರ್ಕಿಯ ಆಂತರಿಕ ಸಚಿವಾಲಯವು ರಾಜಧಾನಿಯಲ್ಲಿ ನಡೆದ ಸ್ಫೋಟವನ್ನು ‘ಭಯೋತ್ಪಾದಕ ದಾಳಿ’ ಎಂದು ಬಣ್ಣಿಸಿದೆ.

“ಇಬ್ಬರು ಭಯೋತ್ಪಾದಕರು ಬೆಳಿಗ್ಗೆ 9:30 ರ ಸುಮಾರಿಗೆ ಲಘು ಸೇನಾ ವಾಹನದಲ್ಲಿ ನಮ್ಮ ಆಂತರಿಕ ಸಚಿವಾಲಯದ ಭದ್ರತಾ ಜನರಲ್ ಡೈರೆಕ್ಟರೇಟ್‌ನ ಪ್ರವೇಶ ದ್ವಾರದ ಮುಂದೆ ಬಂದು ಬಾಂಬ್ ದಾಳಿ ನಡೆಸಿದ್ದಾರೆ” ಎಂದು ಸಚಿವಾಲಯ ತಿಳಿಸಿದೆ.

ಈ ಪ್ರದೇಶದಲ್ಲಿ ಗುಂಡಿನ ಸದ್ದು ಕೂಡ ಕೇಳಿಬಂದಿದ್ದು, ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿವೆ ಎಂದು ಟರ್ಕಿ ಮಾಧ್ಯಮಗಳು ವರದಿ ಮಾಡಿವೆ.

Latest Indian news

Popular Stories