ಬ್ರಹ್ಮಾವರ: ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬೈಕ್ ಸವಾರ ಮೃತ್ಯು

ಬ್ರಹ್ಮಾವರ, ಸೆ.30:ಬೈಕ್ರ ಸವಾರನೊಬ್ಬ ರಸ್ತೆಯಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಘಟನೆ ಉಪ್ಪೂರು ಗ್ರಾಮದ ಅಮ್ಮುಂಜೆ ಕೆಳಕುದ್ರು ಬಳಿ ಇಂದು ಸಂಭವಿಸಿದೆ.

ಧನಂಜಯ ಕುಂದರ್(60) ಮೃತ ಪಟ್ಟ ಬೈಕ್ ಸವಾರರು ಎನ್ನಲಾಗಿದೆ.ತಡರಾತ್ರಿ ಸುರಿದ ಭಾರೀ ಮಳೆಗೆ ವಿದ್ಯುತ್ ತಂತಿ ಸಡಿಲಗೊಂಡು ರಸ್ತೆಗೆ ಅಡ್ಡವಾಗಿ ಜೋತು ಬಿದ್ದಿತ್ತು.ಇಂದು ಬೆಳಗಿನ ಜಾವ ಮೀನುಗಾರಿಕೆಗೆ ಬೈಕಿನಲ್ಲಿ ತೆರಳುತ್ತಿದ್ದ ಧನಂಜಯ ಕುಂದರ್, ತಂತಿಯನ್ನು ಸ್ಪರ್ಶಿಸಿದ ಪರಿಣಾಮ ಬೈಕ್ ಸಮೇತ ರಸ್ತೆ ಮೇಲೆ ಬಿದ್ದು ಮೃತಾಪಟ್ಟಿದ್ದಾರೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories