ಸನಾತನ ಧರ್ಮ ವಿವಾದ: ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಯಾರೂ ಬೆಂಬಲಿಸಲ್ಲ- ಸಂಜಯ್ ರಾವತ್

ಮುಂಬೈ: ಸನಾತನ ಧರ್ಮ ಕುರಿತ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಯಾರೂ ಕೂಡಾ ಬೆಂಬಲಿಸಲ್ಲ ಎಂದು India ಮೈತ್ರಿಕೂಟದ ಭಾಗವಾಗಿರುವ ಶಿವಸೇನೆಯ (ಯುಬಿಟಿ) ಸಂಸದ ಸಂಜಯ್ ರಾವತ್ ಹೇಳಿದ್ದಾರೆ. 

ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ನಾನು ಆ ಹೇಳಿಕೆಯನ್ನು ಕೇಳಿದ್ದೇನೆ. ಉದಯನಿಧಿ ಸ್ಟಾಲಿನ್ ಸಚಿವರಾಗಿದ್ದು, ಅಂತಹ ಹೇಳಿಕೆಗಳನ್ನು ನೀಡುವುದನ್ನು ತಡೆಯಬೇಕು. ಇದು ಡಿಎಂಕೆ ಅಥವಾ ಅವರ ವೈಯಕ್ತಿಕ ದೃಷ್ಟಿಕೋನವಾಗಿರಬಹುದು ಎಂದರು. 

 ಸುಮಾರು 90 ಕೋಟಿ ಹಿಂದೂಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ. ಇತರ ಧರ್ಮದ ಜನರು ಸಹ ಈ ದೇಶದಲ್ಲಿ ವಾಸಿಸುತ್ತಿದ್ದಾರೆ, ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು  ಎಂದು ಸಂಜಯ್ ರಾವತ್ ಹೇಳಿದರು. 

ಸನಾತನ ಧರ್ಮದ ಹೇಳಿಕೆ ವಿವಾದದ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಡಿಎಂಕೆ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ರಾಂಪುರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ.

Latest Indian news

Popular Stories