ಸಾಧುನ ತಡೆಯಬೇಡಿ, ಅವರು ಯಾವಾಗ ಸಿಎಂ ಆಗುತ್ತಾರೋ ಗೊತ್ತಿಲ್ಲ: ವರುಣ್ ಗಾಂಧಿ ವ್ಯಂಗ್ಯ

ಪಿಲಿಭಿತ್‌: ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತಮ್ಮದೇ ಪಕ್ಷದ ಕಾರ್ಯಕ್ರಮವೊಂದರಲ್ಲಿ “ಸಾಧು ಯಾವಾಗ ಸಿಎಂ ಆಗುತ್ತಾರೆ ಅಂತ ಯಾರಿಗೂ ಗೊತ್ತಿಲ್ಲ. ಹೀಗಾಗಿ ಅವರನ್ನು ತಡೆಯಬೇಡಿ ಎಂದು ತಮ್ಮ ಬೆಂಬಲಿಗರಿಗೆ ಕೇಳಿಕೊಂಡ ಘಟನೆ ಸೋಮವಾರ ನಡೆದಿದ.

ವರುಣ್ ಗಾಂಧಿ ಅವರು ತಮ್ಮ ಕ್ಷೇತ್ರ ಪಿಲಿಭಿತ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಸಾಧು ಒಬ್ಬರ ಫೋನ್ ರಿಂಗಣಿಸಲು ಪ್ರಾರಂಭಿಸಿತು. ಈ ವೇಳೆ ಅವರ ಬೆಂಬಲಿಗರು ಫೋನ್ ಸ್ವಿಚ್ ಆಫ್ ಮಾಡುವಂತೆ ಸಾಧುಗೆ ಕೇಳಿಕೊಂಡರು.

ದಯವಿಟ್ಟು ಅವರನ್ನು ತಡೆಯಬೇಡಿ, ಸಾಧು ಸಹ ಯಾವಾಗ ಸಿಎಂ ಆಗುತ್ತಾರೋ ಗೊತ್ತಿಲ್ಲ. ಆಗ ನಮ್ಮ ಗತಿ ಏನು?” ಎಂದು ಗಾಂಧಿ ತಮಾಷೆ ಮಾಡಿದರು.

ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಉಲ್ಲೇಖಿಸಿ ವರುಣ್ ಗಾಂಧಿ ಹೀಗೆ ಟಾಂಗ್ ನೀಡಿದ್ದಾರೆ ಎಂದು ಜನ ವ್ಯಾಖ್ಯಾನಿಸಿದ್ದಾರೆ. ಆದಿತ್ಯನಾಥ್ ಅವರು ಸದಾ ಸಾಧು ಉಡುಗೆಯಲ್ಲೇ ಇರುತ್ತಾರೆ.

Latest Indian news

Popular Stories