ಕೆ.ಎಸ್ ಅರ್ ಟಿಸಿ ಉದ್ಯೋಗಿ ಆತ್ಮಹತ್ಯೆಗೆ ಯತ್ನ

ಡಿಪೋ ಮ್ಯಾನೇಜರ್ ಶ್ರೀಮತಿ ಗೀತಾ ಅವರಿಂದ ಕಿರುಕುಳ ತಾಳಲಾರದೆ ಕೆ.ಎಸ್.ಆರ್. ಸಿ ಸಿಬ್ಬಂದಿ ಹೆಬ್ಬಾಲೆ ಗ್ರಾಮದ ನಿವಾಸಿ ಅಭಿಷೇಕ್ ಎಂಬುವರು ಡಿಪೋ ದಲ್ಲಿ ಇಂದು ಕೆಎಸ್ಆರ್ ಟಿ ಸಿ ಜಿಲ್ಲಾಧಿಕಾರಿ ಜಯಕರ ಶೆಟ್ಟಿ ಮುಂಭಾಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಜರುಗಿದೆ.

IMG 20230830 WA0005 State News

ಡಿಪೋದಲ್ಲಿ ಕಿರಿಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಅಭಿಷೇಕ್ ಅವರಿಗೆ ಡಿಪೋ ಮ್ಯಾನೇಜರ್ ಶ್ರೀಮತಿ ಗೀತಾರವರ ಕಿರುಕುಳದಿಂದ ಬೇಸಿತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.ಇದೀಗ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.. ಶ್ರೀಮತಿ ಗೀತಾ ಕಳೆದ 8 ವರ್ಷಗಳಿಂದ ಡಿಪೋ ಮ್ಯಾನೇಜರ್ ಆಗಿ ಸೇವೆ ಸಾಲಿಸುತಿದ್ದಾರೆ ಹಿಂದಿನ ಸರಕಾರದ ಜಿಲ್ಲೆಯ ಶಾಸಕರಿಂದ ಇವರು ಇಲ್ಲೆ ನೆಲೆ ಕಂಡು ಕೊಂಡಿದ್ದರು. ಇವರ ಬಗ್ಗೆ ವ್ಯಪಾಕ ದೂರುಗಳು ಇದ್ದರು ಇಲ್ಲೆ ಉಳಿಸಿ ಕೊಂಡಿದ್ದರು. ಆದ್ರೆ ಕಳೆದ 15 ದಿನಗಳ ಹಿಂದೆ ಇವರನ್ನು ಸರಕಾರ ವರ್ಗಾವಣೆ ಗೊಳಿಸಿ ಆದೇಶ ಹೊರಡಿಸಿದರು ಆದರೆ ಗೀತಾ ಮತ್ತೆ ಪುನಃ ತನ್ನ ಪ್ರಭಾವ ಬೀರಿ ಇಬ್ಬರು ಶಾಸಕರ ಮನವೊಲಿಸಿ ಇಲ್ಲೆ ಮುಂದುವರಿಯಲು ಹಾಲಿ ಪ್ರಭಾವಿ ರಾಜಕಾರಣಿ ಮೂಲಕ ಶಿಫಾರಸು ಮಾಡಿಸಿದ್ದರು.. ಜಿಲ್ಲೆಯ ಇಬ್ಬರು ಶಾಸಕರಿಗೆ ಎಲ್ಲ ಮಾಹಿತಿಗಳು ಇದ್ದರು ಇವರನ್ನು ಇಲ್ಲೆ ಉಳಿಸಿ ಕೊಂಡಿರುವ ಬಗ್ಗೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಮಾಜಿ ಶಾಸಕರುಗಳ ಬೆಂಬಲದಿಂದ ಇದುವರೆಗೆ ಜಿಲ್ಲೆಯಲ್ಲಿದ್ದ ಗೀತಾ ಅವರ ಕಿರುಕುಳವನ್ನು ಸಹಿಸಲಾರದೆ, ಹಾಲಿ ಶಾಸಕರುಗಳು ಕೂಡ ಇವರ ಬಗ್ಗೆ ಮೃದು ಧೋರಣೆ ಅನುಸರಿಸಿದ್ದನ್ನು ಕಂಡು ಬೇಸಿತ್ತು ಕಿರುಕುಳ ತಾಳಲಾರದೆ ಅಭಿಷೇಕ್ ಈ ರೀತಿಯ ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

Latest Indian news

Popular Stories