ಗದಗ: ಪ್ರವಾದಿ ಮುಹಮ್ಮದ್ (ಸ) ಜೀವನ ಮತ್ತು ಸಂದೇಶ – ಸಾರ್ವಜನಿಕ ಸಮಾರಂಭ

ರೋಣ: ಜನ್ನತ್ ಮಸೀದಿ ಯೂಥ್ ಫೆಡರೇಶನ್ ವತಿಯಿಂದ ಇಂದು ರೋಣ ನಗರದಲ್ಲಿ ಪ್ರವಾದಿ ಮುಹಮ್ಮದ್ (ಸ) ಜೀವನ ಮತ್ತು ಸಂದೇಶ ಕುರಿತು ಸಾರ್ವಜನಿಕ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುರಸಭೆ ಇದರ ಉಪಾಧ್ಯಕ್ಷರಾದ ಶ್ರೀ ಮಿಥುನ್ ಪಾಟೀಲ್, ಮಾತನಾಡುತ್ತಾ ಪ್ರವಾದಿಯವರ ಶಿಕ್ಷಣ ಕೇವಲ ಮುಸ್ಲಿಮರಿಗೆ ಮಾತ್ರವಲ್ಲ ಇಡೀ ಮಾನವ ಕುಲಕ್ಕೆ ಮಾರ್ಗದರ್ಶನವಾಗಿದೆ, ನಾವು ಎಲ್ಲ ಧರ್ಮದ ಸಾರವನ್ನು ಅರಿಯಲು ಪ್ರಯತ್ನಿಸುತ್ತಿರಬೇಕು ಎಂದು ಹೇಳಿದರು ,

ಇನ್ನೋರ್ವ ಅತಿಥಿ ಜ. ರಿಯಾಝ್ ಅಹ್ಮದ್, ರಾಜ್ಯ ಕಾರ್ಯದರ್ಶಿ BIE, ಮಾತನಾಡುತ್ತಾ “ಪ್ರವಾದಿ ಮುಹಮ್ಮದ್ (ಸ) ಮಾನವ ಕುಲದ ವಿಮೋಚಕರಾಗಿದ್ದಾರೆ, ಅವರ ಸಂದೇಶವನ್ನು ಇಡೀ ಮಾನವ ಸಮೂಹಕ್ಕೆ ತಲುಪಿಸುವ ಗುರುತರ ಜವಾಬ್ದಾರಿ ಮುಸ್ಲಿಂ ಸಮುದಾಯದ ಮೇಲೆ ಇದೆ ಎಂದು ಹೇಳಿದರು. ಇದೇ ವೇಳೆ ದಲಿತ ಮುಖಂಡ ಹಾಗೂ ಬರಹಗಾರ ಶ್ರೀ ವೀರಯ್ಯ ತಗ್ಗಿನಮನಿ, ಜ. ಟಿಪ್ಪು ಸುಲ್ತಾನ್ ಮುಂತಾದರು ಸಭಿಕರನ್ನುದ್ದೇಶಿಸಿ ಮಾತನಾಡಿದರು, ಅಂಜುಮನ್ ಹೈಸ್ಕೂಲ್ ರೋಣ ಇದರ ನಿವೃತ್ತ ಮುಖ್ಯೋಪಾಧ್ಯಾಯರಾದ ಜ. A.S ಖತೀಬ್ ಕಾರ್ಯಕ್ರಮದ ಅಧ್ಯಕ್ಷತೆಯನ್ನವಹಿಸಿ ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಜ. ಬಾವಾಸಾಬ್ ಬೆಟಿಗೇರಿ, ಶಿಕ್ಷಕರಾದ ಜ. ಇರ್ಷಾದ್ ಮುಲ್ಲಾ, ಜ. ಕೂಲ್ಕಾರ್ ಮುಂತಾದರು ಉಪಸ್ಥಿತರಿದ್ದರು.

Latest Indian news

Popular Stories