ಕಾರಿನೊಳಗೆ ಗುಂಡಿನ ದಾಳಿ; ಇಬ್ಬರು ಮೃತ್ಯು!

ಹಾಸನ: ಕಾರಿನೊಳಗೆ ನಡೆದ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ ಘಟನೆ ಹಾಸನದಲ್ಲಿ ಗುರುವಾರ ನಡೆದಿದೆ.

ಹಾಸನದ ಹೊಯ್ಸಳ ನಗರದ ಹಳೆ ಮಾಸ್ಟರ್ಸ್ ಕಾಲೇಜು ಬಳಿ ಗುರುವಾರ ಮಧ್ಯಾಹ್ನ 12.50 ರ ಸಮಯದಲ್ಲಿ ಈ ಘಟನೆ ನಡೆದಿದೆ.

ಕಾರಿನಲ್ಲಿ ಕುಳಿತು ಮಾತನಾಡುತ್ತಿದ್ದ ಇಬ್ಬರು ಯುವಕರ ನಡುವೆ ಜಗಳ ಆರಂಭವಾಗಿದ್ದು ಆ ಸಂದರ್ಭದಲ್ಲಿ ಒಬ್ಬ ಹಾರಿಸಿದ ಗುಂಡಿಗೆ ಒಬ್ಬ ಕಾರಿನಿಂದ ಹೊರಗೆ ಬಿದ್ದು ಸಾವನ್ನಪ್ಪಿದ್ದಾನೆ.
ಆನಂತರ ಮತ್ತೊಬ್ಬ ಕಾರಿನೊಳಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಮೃತರ ವಿವರ ತಿಳಿದು ಬಂದಿಲ್ಲ. ಒಂದು ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Latest Indian news

Popular Stories