
INTERNATIONAL
ಚೀನಾದ ಕಲ್ಲಿದ್ದಲು ಗಣಿ ಕಂಪನಿ ಕಟ್ಟಡದಲ್ಲಿ ಬೆಂಕಿ: 25 ಮಂದಿ ಸಜೀವ ದಹನ
ಬೀಜಿಂಗ್:ಚೀನಾದ ಉತ್ತರ ಶಾಂಕ್ಸಿ ಪ್ರಾಂತ್ಯದಲ್ಲಿ ಕಲ್ಲಿದ್ದಲು ಕಂಪನಿಯ ಕಚೇರಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯಲ್ಲಿ 25 ಜನರು ಸಾವನ್ನಪ್ಪಿದ್ದಾರೆ. ಬೆಳಗ್ಗೆ 6:50ಕ್ಕೆ ಬೆಂಕಿ ಕಾಣಿಸಿಕೊಂಡಿದೆ.
ದೇಶದ ಅಗ್ರ ಕಲ್ಲಿದ್ದಲು ಉತ್ಪಾದನಾ ಕೇಂದ್ರವಾದ ಶಾಂಕ್ಸಿಯಲ್ಲಿರುವ ನಾಲ್ಕು ಅಂತಸ್ತಿನ ಯೋಂಗ್ಜು ಕಲ್ಲಿದ್ದಲು ಉದ್ಯಮದ ಜಂಟಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.




