
INTERNATIONAL
ದೋಣಿ ಮಗುಚಿ ಕನಿಷ್ಠ 27 ಜನರು ಜಲಸಮಾಧಿ – 70 ಕ್ಕೂ ಹೆಚ್ಚು ಜನರು ನಾಪತ್ತೆ
ಕಾಂಗೋದ :ವಾಯುವ್ಯದಲ್ಲಿ ದೋಣಿ ದುರಂತ ಸಂಭವಿಸಿದ್ದು ಕನಿಷ್ಠ 27 ಜನರು ಮೃತಪಟ್ಟಿದ್ದಾರೆ ಮತ್ತು 70 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಕಾಂಗೋ ನದಿಯ ಮೂಲಕ ಬೊಲೊಂಬಾ ಪಟ್ಟಣಕ್ಕೆ 100 ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತಿದ್ದಾಗ ಈ ಘೋರ ದುರಂತ ಸಂಭವಿಸಿದೆ.“ಈಗಾಗಲೇ 27 ಜನರ ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಎಂಬಂಡಾಕಾದ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ” ಎಂದು ಎನ್ಗಾಂಜಿ ಹೇಳಿದರು, ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆ ಪ್ರಾರಂಭವಾಗಿದೆ ಎಂದು ಹೇಳಿದರು.




