
Bengaluru UrbanFeatured Story
ಇಂದೂ ಮುಂದುವರೆದ IT ದಾಳಿ : ಬಿಲ್ಡರ್ ಸಂತೋಷ್ ಮನೆಯಲ್ಲಿ 40 ಕೋಟಿ ಹಣ ಪತ್ತೆ
ಬೆಂಗಳೂರ: ಐಟಿ ಧಾಳಿ ಮುಂದುವರೆದಿದ್ದು ಐಟಿ ಅಧಿಕಾರಿಗಳು ಕಂತೆ ಕಂತೆ ಹಣ ವಶಪಡಿಸಿಕೊಂಡಿದ್ದಾರೆ. ಇಂದು 40 ಕೋಟಿ ಹಣ ಪತ್ತೆಯಾಗಿದೆ
ಬಿಲ್ಡರ್ ಸಂತೋಷ್ ಮನೆಯಲ್ಲಿ 40 ಕೋಟಿ ಹಣ ಪತ್ತೆಯಾಗಿದೆ. ಈ ಹಣ ಎಂಎಲ್ಸಿ ಯೊಬ್ಬರದು ಎಂದು ಹೇಳಲಾಗುತ್ತಿದೆ.ಬೆಮೆಲ್ ಕಾಂತರಾಜು ಎಂಬುವವರದು ಎಂದು ಹೇಳಲಾಗುತ್ತಿದೆ.ಈ ಬಗ್ಗೆ ಕಾಂತರಾಜು ಸ್ಪಷ್ಟನೆ ನೀಡಿದ್ದು ಆ ಹಣ ನನ್ನದಲ್ಲ ಎಂದು ಹೇಳಿದ್ದಾರೆ. ಕೇತಮಾರನಹಳ್ಳಿ ಐಟಿ ದಾಳಿ ಕುರಿತು ನನಗೆ ಮಾಹಿತಿ ಇಲ್ಲ.ಸಂತೋಷ್ ಯಾರೆಂದು ನನಗೆ ಸರಿಯಾಗಿ ಗೊತ್ತಿಲ್ಲ ” ಎಂದು ಅವರು ಹೇಳಿದ್ದಾರೆ




