ಅಬುಧಾಬಿಯಲ್ಲಿ ‘UPI ರುಪೇ ಕಾರ್ಡ್’ ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಪ್ರಾಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 13 ರಂದು ಎರಡು ದಿನಗಳ ಯುಎಇ ಪ್ರವಾಸಕ್ಕೆ ಆಗಮಿಸಿದ್ದಾರೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಪ್ರಧಾನಿಯನ್ನು ಸ್ವಾಗತಿಸಿದರು.

ಈ ವೇಳೆ ಪ್ರಧಾನಿ ಮೋದಿ ಅಬುಧಾಬಿಯಲ್ಲಿ ಯುಪಿಐ ರುಪೇ ಕಾರ್ಡ್ ಸೇವೆಗೆ ಚಾಲನೆ ನೀಡಿದರು.

ಪ್ರಧಾನಿ ಮೋದಿ ದೇಶಕ್ಕೆ ಆಗಮಿಸಿದಾಗ ಅವರಿಗೆ ಗೌರವ ರಕ್ಷೆ ನೀಡಲಾಯಿತು. ನಂತರ ಅವರಿಗೆ ಅಧ್ಯಕ್ಷರ ಅರಮನೆಯಾದ ಖಸ್ರ್ ಅಲ್ ವತನ್ ನಲ್ಲಿ ಔಪಚಾರಿಕ ಸ್ವಾಗತ ನೀಡಲಾಯಿತು. ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸಲು ನಾಯಕರು ಸಭೆಗಳನ್ನು ನಡೆಸಲಿದ್ದಾರೆ.2015ರ ಬಳಿಕ ಪ್ರಧಾನಮಂತ್ರಿಯವರು ಯುಎಇಗೆ ನೀಡುತ್ತಿರುವ ಏಳನೇ ಭೇಟಿ ಇದಾಗಿದೆ.

Latest Indian news

Popular Stories