ಬೀದರ ನೂತನ ನಗರ ಪೊಲೀಸ ಠಾಣೆ ಅಪರಾಧ ಸಂ. ೨೦೭/೯೯ ಕಲಂ ೩೦೨ ಐಪಿಸಿ ಪ್ರಕರಣದಲ್ಲಿಯ ಆರೋಪಿತನಿಗೆ ಜೀವಾವಧಿ ಶಿಕ್ಷೆ ಹಾಗೂ ೧೦,೦೦೦/- ರೂ. ದಂಡ ವಿಧಿಸಿ ತೀರ್ಪು ನೀಡಿರುವ ಬಗ್ಗೆ

ದಿನಾಂಕ ೨೧-೧೧-೧೯೯೯ ರಂದು ಆರೋಪಿತನಾದ ಮಲ್ಲಿಕಾರ್ಜುನ ತಂದೆ ಪ್ರಭುರಾವ ಪಾಟೀಲ್, ವಯ: ೫೦ ವರ್ಷ, ಸಾ: ಯಲ್ಲಾಲಿಂಗ ಕಾಲೋನಿ ನೌಬಾದ ಬೀದರ, ಇತನು ಮೃತ ಪುಷ್ಪಾವತಿ ಇವಳಿಗೆ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದು ಸದರಿಯವಳಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ ೨೪-೧೧-೧೯೯೯ ರಂದು ಮೃತಪಟ್ಟಿರುತ್ತಾಳೆ. ಈ ಸಂಬAಧ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. ೨೦೭/೧೯೯೯ ಕಲಂ. ೩೦೨ ಐಪಿಸಿ ನೇದರಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ. ಸದರಿ ಪ್ರಕರಣಕ್ಕೆ ಸಂಬAಧಿಸಿದAತೆ ಅಂದಿನ ಸಿಪಿಐ ರವರಾದ ಶ್ರೀ ತೀರ್ಥರಾಜು ರವರು ನ್ಯಾಯಾಲಯಕ್ಕೆ ದೋಷಾರೊಪಣೆ ಪತ್ರ ಸಲ್ಲಿಸಿದ್ದು ಅದರ ಎಸ್.ಸಿ. ನಂ. ೧೭೫/೨೦೧೬ ನೇದರಲ್ಲಿ ವಿಚಾರಣೆ ನಡೆದಿರುತ್ತದೆ.

ದಿನಾಂಕ ೦೯-೦೭-೨೦೨೧ ರಂದು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀ ಮಲ್ಲಿಕಾರ್ಜುನ ಪತ್ತಾರ ರವರು ವಾದ ಮಂಡಿಸಿರುತ್ತಾರೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ನ್ಯಾಯಾಲಯ, ಬೀದರ ರವರು ಪ್ರಕರಣದ ಆರೋಪಿತನಾದ ಮಲ್ಲಿಕಾರ್ಜುನ ತಂದೆ ಪ್ರಭುರಾವ ಪಾಟೀಲ್, ವಯ: ೫೦ ವರ್ಷ, ಸಾ: ಯಲ್ಲಾಲಿಂಗ ಕಾಲೋನಿ ನೌಬಾದ ಬೀದರ, ಇತನಿಗೆ ಸದರಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ ೧೦,೦೦೦/- ರೂ. ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಸದರಿ ಪ್ರಕರಣದಲ್ಲಿ ದೋಷಾರೊಪಣೆ ಪತ್ರ ಸಲ್ಲಿಸಿ ಆರೋಪಿತನಿಗೆ ಜೀವಾವಧಿ ಶಿಕ್ಷೆ ಆಗುವಂತೆ ತನಿಖೆ ಕಾರ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯ ಶ್ಲಾಘನೀಯವಾಗಿದೆ

Latest Indian news

Popular Stories

error: Content is protected !!