ಅಂಗಡಿಯಲ್ಲಿ ಕುಳಿತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ ಉದ್ಯಮಿಯೊಬ್ಬರು ಅಸು ನೀಗಿರುವ ಘಟನೆ ಇಂದು ಬೆಳಿಗ್ಗೆ ಗೋಣಿಕೊಪ್ಪದಲ್ಲಿ ನಡೆದಿದೆ.
ಪೊನ್ನಂಪೇಟೆ ರಸ್ತೆಯಲ್ಲಿರುವ ಮಂಜುನಾಥ ಟ್ರೇಡರ್ಸ್ ಪಾಲುದಾರರಾದ ನಾಗಿ ರೆಡ್ಡಿ (55) ಎಂಬುವವರೇ ವಿಧಿಯ ಅಟ್ಟಹಾಸಕ್ಕೆ ಸಿಲುಕಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಜೀವ ತೆತ್ತವರಾಗಿದ್ದಾರೆ.
ಎಂದಿನಂತೆ ಇಂದು ಬೆಳಿಗ್ಗೆ 9.40ರ ಸಮಯದಲ್ಲಿ ವ್ಯಾಪಾರದಲ್ಲಿ ತೊಡಗಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭ ದಿಡೀರ್ ಹೃದಯಾಘಾತ ಉಂಟಾಗಿ ಇನ್ನೇನು ಕೆಳಗೆ ಬೀಳು ತ್ತಾರೆನ್ನುವಷ್ಟರಲ್ಲಿ ಅಲ್ಲಿದ್ದವರು ನೆರವಿಗೆ ಧಾವಿಸಿ ಗೋಣಿಕೊಪ್ಪಲು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ.