ಕೊಡಗಿನಲ್ಲಿ ಹೆಚ್ಚಾಗುತಿದೆ ಕಾಡಾನೆ ದಾಳಿಗಳು: ಸುಂಟಿಕೊಪ್ಪ ಸಮೀಪ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿ ಮೇಲೆ ದಾಳಿ ಬೈಕ್ ಜಖಂ

ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಡಿ ಬ್ಲಾಕ್ ಬಳಿ ಒಂಟಿಸಲಗವೊಂದು ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದು, ಸಣ್ಣಪುಟ್ಟ ಗಾಯಗಳಿಂದ ಸವಾರ ಪಾರಾದ ಘಟನೆ ಸೋಮವಾರ ಬೆಳಿಗ್ಗೆ 9 ಸಮಯದಲ್ಲಿ ನಡೆದಿದೆ‌.
ಸುಂಟಿಕೊಪ್ಪ ನಿವಾಸಿ ಕಾರ್ಪೆಂಟರ್ ಮುರುಗೇಶ್ ಎಂದು ತಿಳಿದುಬಂದಿದೆ.


ಸುಂಟಿಕೊಪ್ಪ ದಿಂದ ಕೆಲಸಕ್ಕೆಂದು ಡಿ ಬ್ಕಾಕ್ ಬಳಿ ತೆರಳುತ್ತಿದ್ದ ವೇಳೆ ಏಕಾಏಕಿ ನುಗ್ಗಿ ದಾಳಿ ನಡೆಸಿದೆ.ದಾಳಿಯಿಂದ ಬೈಕ್ ಜಖಂಗೊಂಡಿದೆ‌.ಗಾಯಗೊಂಡ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಂಬುಲೆನ್ಸ್ ಮೂಲಕ ಮಡಿಕೇರಿಗೆ ರವಾನಿಸಿದ್ದಾರೆ.
ಅಲ್ಲಿಂದ ಪಲಾಯನ ಮಾಡಿದ ಆ ಕಾಡಾನೆ ಅಲ್ಲೇ ಅನತಿ ದೂರದಲ್ಲಿದ್ದ ಹಬೀಬ್ ತೋಟದತ್ತ ತೆರಳುತ್ತಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ದಾಳಿ ನಡೆಸಿ ದೇವರ ಕಾಡಿನೊಳಗೆ ಓಡಿ ಹೋಗಿದೆ ಎಂದು ತಿಳಿದುಬಂದಿದೆ.

Latest Indian news

Popular Stories