ನಲ್ವತ್ತು ಎಕರೆಯ ಪೀಪಲ್ಸ್ ವಿಲ್ಲೇಜ್ ನಿವಾಸಿಗಳಿಗಾಗಿ ಜೂನ್ 24 ರಂದು ಬೆಳಿಗ್ಗೆ ವಿಲ್ಲೇಜ್ ವಠಾರದಲ್ಲಿ ಆಯೋಜಿಸಲಾದ ಈದ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪೀಪಲ್ಸ್ ಪೌಂಡೇಶನ್ನಿನ ವತಿಯಿಂದ ನಿರ್ಮಿಸಿಕೊಡಲಾಗಿರುವ ಪ್ರಸ್ತುತ ಪೀಪಲ್ಸ್ ವಿಲ್ಲೇಜ್ನಲ್ಲಿ ವಿವಿಧ ಧರ್ಮದವರು ವಾಸಮಾಡುತ್ತಿದ್ದು ಪರಸ್ಪರ ಸೌಹಾರ್ದದಿಂದ ಸಹಬಾಳ್ವೆಯ ಜೀವನ ನಡೆಸಬೇಕೆಂದು ಅವರು ಕರೆ ನೀಡಿದರು.
ನೈತಿಕವಾಗಿಯೂ ಸಾಮಾಜಿಕವಾಗಿಯೂ ಉನ್ನತ ಮಟ್ಟವನ್ನು ಕಾಯ್ದುಕೊಳ್ಳುವುದರೊಂದಿಗೆ ಪೀಪಲ್ಸ್ ವಿಲ್ಲೇಜನ್ನು ಕೆಡುಕು ಮುಕ್ತ ಗ್ರಾಮವಾಗಿ ಮಾರ್ಪಡಿಸಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನೆಲ್ಯಹುದಿಕೇರಿ ಗ್ರಾಮ ಪಂಚಾಯತಿನ ನಿಕಟಪೂರ್ವ ಅಧ್ಯಕ್ಷರಾದ ಎ.ಕೆ. ಹಕೀಮ್ ರವರು 2019ರಲ್ಲಿ ಸಿದ್ಧಾಪುರ ಪರಿಸರದಲ್ಲಿ ಸಂಭವಿಸಿದ ನೆರೆಹಾವಳಿಯ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಸಂಘಟನೆಯ ಅಧೀನ ಸಂಸ್ಥೆಗಳ ವತಿಯಿಂದ ನಡೆಸಲಾದ ಸೇವಾಕಾರ್ಯಗಳನ್ನು ಮುಕ್ತಕಂಠವಾಗಿ ಶ್ಲಾಘಿಸಿದರು.
ಪಂಚಾಯತಿನ ನಿಯುಕ್ತ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ,ಉಪಾಧ್ಯಕ್ಷೆ ಶ್ರೀಮತಿ ಪ್ರಮೀಳಾ,ನಲ್ವತ್ತು ಎಕರೆ ಮಸೀದಿ ಅಧ್ಯಕ್ಷ ಬೀರಾನ್ ಕುಟ್ಟಿ, ಜ.ಇ.ಹಿಂದ್ ಕೊಡಗು ಜಿಲ್ಲಾ ಮಹಿಳಾ ವಿಭಾಗ ಸಂಚಾಲಕಿ ಝೈನಬಾ ರಹ್ಮಾನ್ ಶುಭ ಹಾರೈಸಿದರು. ಜ.ಇ. ಹಿಂದ್ ಮೈಸೂರು ವಲಯದ ನಿಯುಕ್ತ ಕಾರ್ಯದರ್ಶಿ ಪಿ.ಕೆ.ಅಬ್ದುರ್ರಹ್ಮಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ.ಇ.ಹಿಂದ್ ಸಿದ್ಧಾಪುರ ಸ್ಥಾನೀಯ ಅಧ್ಯಕ್ಷರಾದ ಅಬ್ದುಲ್ ಗಫೂರ್ ಸ್ವಾಗತ ಕೋರಿದರು. ಜ.ಇ. ಹಿಂದ್ ಮೈಸೂರು ವಲಯ ಸಂಚಾಲಕರಾದ ಅಬ್ದುಸ್ಸಲಾಮ್. ಯು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಆರಂಭದಲ್ಲಿ ಹಫೀಫ್ ಕಿರಾಅತ್ ಪಠಿಸಿದರು. ಟಿ.ಎ ಬಶೀರ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು. ಜ. ಇ. ಹಿಂದ್ ನೂತನ ಕೊಡಗು ಜಿಲ್ಲಾ ಸಂಚಾಲಕರಾದ ಅಫ್ಸರ್ ಮಡಿಕೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.