ಕೊಡಗು | ಯಾವುದೇ ಕಾಳಜಿ ಇಲ್ಲದ ನಿಷ್ಕ್ರಿಯ ಸಂಸದ ಪ್ರತಾಪ ಸಿಂಹ – ಸಂಕೇತ್ ಪೂವಯ್ಯ

ಕೊಡಗು: ಜಿಲ್ಲೆಯ ಮೂಲಭೂತ ಸಮಸ್ಯೆಗಳ ಕುರಿತು ತಮ್ಮ ಅವದಿಯಲ್ಲಿ ಯಾವುದೇ ಕಾಳಜಿ ತೋರದ ಸಂಸದ ಪ್ರತಾಪ ಸಿಂಹ ಅವರು ಅತ್ಯಂತ ನಿಷ್ಕ್ರಿಯ ಸಂಸದರು ಎಂದು ಕೆ.ಪಿ.ಸಿ.ಸಿ ವಕ್ತಾರ ಮೇರಿಯಂಡ ಪೂವಯ್ಯ ಆರೋಪಿಸಿದರು..ಸುದ್ದಿ ಗೋಷ್ಠಿಯಲ್ಲಿ ಅವರು ಚುನಾವಣಾ ಸಂಧರ್ಭಗಳಲ್ಲಿ ಪ್ರತ್ಯಕ್ಷರಾಗುವ ಪ್ರತಾಪ ಸಿಂಹರವರು ಭಾವನಾತ್ಮಕ ಮತ್ತು ಧರ್ಮಾದಾರಿತ ವಿಚಾರಗಳನ್ನೆತ್ತಿ ಮೋದಿ ಹೆಸರನ್ನು ಹೇಳಿ ಮತಯಾಚಿಸುವ ಅವರು ಅಭಿವೃದ್ಧಿ ಪರ ಚಿಂತನೆ ಹೊಂದಿಲ್ಲ ,ಮುಂದಿನ ಲೋಕಸಭೆಯ ಚುನಾವಣೆಯಲ್ಲಿ ಕನಿಷ್ಠ ಎರಡು ಲಕ್ಷ ಮತಗಳ ಅಂತರದಿಂದ ಅವರು ಸೂಲುವುದು ಖಚಿತ ಎಂದು ಹೇಳಿದರು.

ಕಳೆದ ಒಂಬತ್ತುವರೆ ವರ್ಷಗಳಲ್ಲಿ ಬೆಳೆಗಾರರ ಹಾಗೂ ಜನಸಾಮಾನ್ಯರ ಮೂಲಭೂತ ಸಮಸ್ಯೆಗಳನ್ನು ಸಂಸತ್ ನಲ್ಲಿ ಪ್ರಭಲವಾಗಿ ಮಂಡಿಸಿ ಕೇಂದ್ರದ ಗಮನ ಸೆಳೆಯಲು.ಪ್ರತಾಪ ಸಿಂಹರವರು ಸಂಪೂರ್ಣವಾಗಿ ಪರಾಜಯ ಹೊಂದಿದ್ದಾರೆ ಸಂಸದರಾಗಿ ಆಯ್ಕೆಯಾದ ಎರಡೂ ಕ್ಷೇತ್ರಗಳಲ್ಲಿ ಅವರದ್ದೇ ಪಕ್ಷ ಅಧಿಕಾರದಲ್ಲಿ ಇದ್ದರೂ ಸ್ತಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು

Latest Indian news

Popular Stories