ಉಡುಪಿ: ಸಂತೆಕಟ್ಟೆ ಒವರ್ ಪಾಸ್ ಮತ್ತು ಇಂದ್ರಾಳಿಯ ಹೆದ್ದಾರಿಯ ಕಾಮಗಾರಿ ನಿಧನಗತಿಯಲ್ಲಿ ಸಾಗುತ್ತಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂತೆಕಟ್ಟೆ ಮತ್ತು ಇಂದ್ರಾಳಿಯ ಸೇತುವೆ ಕಾಮಗಾರಿ ವೇಗ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಮಳೆಯ ಕಾರಣಕ್ಕೆ ಮತ್ತು ತಾಂತ್ರಿಕ ಕಾರಣಕ್ಕೆ ಕಾಮಗಾರಿ ತಡವಾಗಿದೆ. ಈಗಾಗಲೇ ಸಂತೆಕಟ್ಟೆ ಕಾಮಗಾರಿ ಆರಂಭಗೊಂಡಿದೆ. ಇಂದ್ರಾಳಿ ಸೇತುವೆ ಕಾಮಗಾರಿ ರೈಲ್ವೆ ಇಲಾಖೆಯ ಅಡಿಯಲ್ಲಿ ಬರುವುದರಿಂದ ಅದರ ಫ್ಯಾಬ್ರಿಕೇಷನ್ ಹುಬ್ಬಳಿಯಲ್ಲಿ ತಯಾರಾಗಿ ಬರಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.