KodaguFeatured Story

ಪೊನಂಪೇಟೆ ಬಳಿಯ ಬರಪೊಳೆಯ ಆರ್ಜಿಗುಂಡ್ಡಿ ಯಲ್ಲಿ ಮೂವರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಶವ ಪತ್ತೆ.

ಪೊನ್ನಂಪೇಟೆ ತಾಲೂಕು ಕುಂದ ಸಮೀಪದ ಆರ್ಜಿಗುಂಡ್ಡಿ ಬಳಿ ತೆರಳಿದ ಮೂವರು ಹಳ್ಳಿಗಟ್ಟುವಿನ ಸಿಐಟಿ ಕಾಲೇಜಿನ ವಿದ್ಯಾರ್ಥಿಗಳು ಇಂದು ಮೃತ ಪಟ್ಟ ಘಟನೆ ನಡೆದಿದೆ.

ಕಾಲೇಜಿನಿಂದ ಐದು ಕಿಲೋಮೀಟರ್ ದೂರದಲ್ಲಿರುವ ಕೇರಳಕ್ಕೆ ಹರಿಯುವ ಬರಪೊಳೆ ನದಿಯಲ್ಲಿ ಈ ಘಟನೆ ನಡೆದಿದೆ.ಪೊನ್ನಂಪೇಟೆ ಪೊಲೀಸರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ತೆರಳಿ ಮೃತ ದೇಹದ ಗುರುತುಸ್ವಿಕೆ ಮತ್ತು ಶವವನ್ನು ಮೇಲೆತ್ವ ಕಾರ್ಯದಲ್ಲಿ ತೊಡಗಿದ್ದಾರೆ.ನಾಲ್ವರು ಊಟ ಮಾಡಲೆಂದು ಹೊಳೆ ಬದಿಗೆ ತೆರಳಿದ್ದರು ಆಕಸ್ಮಿಕವಾಗಿ ಒಬ್ಬರು ಕಾಲು ಜಾರಿದ್ದರಿಂದ ಇನ್ನಿಬ್ಬರು ಸಹಾಯ ಮಾಡಲು ಹೋಗಿ ಸಾವನಪ್ಪಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಮೃತರೆಲ್ಲರೂ ಕೊಡಗು ಮೂಲದವರು ಎಂದು ಹೇಳಲಾಗುತ್ತಿದೆ ಇನ್ನಷ್ಟೇ ಮೃತಪಟ್ಟವರ ಗುರುತು ಸಿಗಬೇಕಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button