KoppalFeatured Story

ಬಿಎಲ್​ ಸಂತೋಷ್ ಭಾಷಣದ ವೇಳೆ ಪೊಲೀಸರ ಎಂಟ್ರಿ – ಭಾಷಣ ನಿಲ್ಲಿಸಲು ಸೂಚನೆ

ಕೊಪ್ಪಳ: ಗಂಗಾವತಿಯಲ್ಲಿ ಬಿಜೆಪಿ ಡಿಜಿಟಲ್ ಕಾರ್ಯಕರ್ತರ ಸಮಾವೇಶದಲ್ಲಿ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್(BL SANTHOSH) ಭಾಷಣ ಮಾಡುತ್ತಿದ್ದಾಗ ಪೊಲೀಸರು ಎಂಟ್ರಿ ಕೊಟ್ಟು ಭಾಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಚುನಾವಣಾಧಿಕಾರಿಗಳಿಂದ ಪರವಾನಿಗೆ ಪಡೆದ ಸಮಯ ಮೀರಿ ಸಮಾವೇಶ ಮುಂದುವರೆಸಿದ ಹಿನ್ನೆಲೆ ಸಭೆಗೆ ಆಗಮಿಸಿದ ಚುನಾವಣೆ ಅಧಿಕಾರಿಗಳು ಮತ್ತು ಪೊಲೀಸರು, ಬಿ.ಎಲ್ ಸಂತೋಷ ಭಾಷಣದ ವೇದಿಕೆ ಆಗಮಿಸಿ ಕಾರ್ಯಕ್ರಮ ನಿಲ್ಲಿಸಿ ಎಂದು ಸೂಚಿಸಿದರು. ಭಾಷಣದ ವೇಳೆ ನೋಟಿಸ್ ನೀಡಿದರೆ ನೀವು ಹೆದರಬೇಡಿ, ನಾನು ಎದುರಿಸುತ್ತೇನೆ ಎಂದು ಬಿ.ಎಲ್.ಸಂತೋಷ್ ಹೇಳಿದರು. ಕೊನೆಗೆ ಅಧಿಕಾರಿಗಳ ಸೂಚನೆ ಮೇರೆಗೆ ಭಾಷಣ ನಿಲ್ಲಿಸಿ ಕಾರ್ಯಕ್ರಮ ಮುಗಿಸಲಾಯಿತು. ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರಿಂದ ಮೋದಿ, ಮೋದಿ ಎಂದು ಘೋಷಣೆ ಕೂಗಲಾಯಿತು. ಬಿ.ಎಲ್ ಸಂತೋಷಗೆ ಶಾಸಕರು, ಸಚಿವರು, ಸಂಸದರು ಸಾಥ್ ನೀಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button