ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗೆ ಎರಡು ದಿನಗಳ ಜಾಮೀನು ಮಂಜೂರು

ಸುಳ್ಯ : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗೆ ಎರಡು ದಿನಗಳ ಜಾಮೀನು ದೊರೆತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ಇಬ್ರಾಹಿಂ ಶಾ ನಾವೂರು ನನ್ನು 15ನೇ ಆರೋಪಿಯಾಗಿ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು.

ಸುಳ್ಯದಲ್ಲಿ ಈತನ ತಂಗಿಯ ಮದುವೆ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಜಾಮೀನು ದೊರೆತಿದೆ ಎಂದು ತಿಳಿದು ಬಂದಿದೆ.ಪ್ರಸ್ತುತ ಈತ ಮೈಸೂರಿನ ಜೈಲಿನಲ್ಲಿದ್ದು ಜಾಮೀನು ಅವಧಿ ಮುಗಿದ ಬಳಿಕ ಮತ್ತೆ ಜೈಲು ಸೇರಬೇಕಿದೆ. 2022 ಜುಲೈ 26ರಂದು ಬೆಳ್ಳಾರೆಯಲ್ಲಿ ತನ್ನ ಚಿಕನ್ ಶಾಪ್ ಎದುರೇ ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರ್ ಮೇಲೆ ಎರಗಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ ಐಎ ಹಲವರನ್ನು ಬಂಧಿಸಿತ್ತು.

Latest Indian news

Popular Stories