ನವದೆಹಲಿ : ಇಂದಿನಿಂದ 17ನೇ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಗಳು ಆರಂಭವಾಗುತ್ತಿದ್ದು, ಭಾರತದ ವೇಗಿ ಮಹಮ್ಮದ್ ಶಮಿ ಗಾಯದಿಂದ ನರಳುತ್ತಿದ್ದೂ, ಈ ಬಾರಿ ಐಪಿಎಲ್ ನಲ್ಲಿ ಅವರು ಆಡುತ್ತಿಲ್ಲ. ಹೀಗಾಗಿ ವಿದೇಶಕ್ಕೆ ತೆರಳಿ ಅವ್ರು ಇದೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಗುಣಮುಖರಾಗಲು ಕನಿಷ್ಠವೆಂದು ಆರು ತಿಂಗಳು ಆದರೂ ಬೇಕು.
ಇದರೆಲ್ಲರ ಮಧ್ಯ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಾಸಿನ್ ಜಾನ್ ಅವರು ಬಿಜೆಪಿ ಜೊತೆಗೆ ಸೇರಿ ನನ್ನನ್ನು ಕೊಳ್ಳಲು ಯತಿಸುತ್ತಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.
ಶಮಿ ನನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ಹಸಿನ್ ಜಹಾನ್ ಆರೋಪಿಸಿದ್ದಾರೆ. ಕೊಲೆ ಮಾಡಲು ಪ್ಲಾನ್ ಮಾಡುತ್ತಿದ್ದಾನೆ. ಉತ್ತರ ಪ್ರದೇಶ ಪೊಲೀಸರು ಮತ್ತು ಬಿಜೆಪಿ ಸರ್ಕಾರದ ಸಹಾಯದಿಂದ ಸಂಚು ರೂಪಿಸುತ್ತಿದ್ದಾನೆ.ನನಗೆ ಇಲ್ಲಿಯವರೆಗೆ ಪೂರ್ಣ ನ್ಯಾಯ ಸಿಕ್ಕಿಲ್ಲ. ಸುಪ್ರೀಂಕೋರ್ಟ್‌ಗೆ ಹೋದರೆ ಅಲ್ಲಿ ಪ್ರಕರಣ ಪದೇಪದೆ ಮುಂದೂಡಲಾಗುತ್ತಿದೆ. ಹೈಕೋರ್ಟ್‌ನಲ್ಲಂತೂ ನನ್ನ ಮಾತು ಕೇಳುವವರೇ ಇಲ್ಲ. ಕೆಲವರ ಷಡ್ಯಂತ್ರದಿಂದ ನನ್ನ ಪ್ರಕರಣ ಹೈಕೋರ್ಟ್‌ಲ್ಲೂ ದಾಖಲಾಗಿಲ್ಲ ಎಂದು ಹಸಿನ್ ಜಹಾನ್ ಹೇಳಿದ್ದಾರೆ. ಶಮಿ ಮಾಜಿ ಪತ್ನಿಯ ಕಾಮೆಂಟ್ ಈಗ ವೈರಲ್ ಆಗಿದೆ.