ಮೈಸೂರು : ಭಾರೀ ಮಳೆ ಹಿನ್ನಲೆ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳ

ಮೈಸೂರು : ಕೇರಳದ ವಯನಾಡು ಭಾಗದಲ್ಲಿ ಭಾರೀ ಮಳೆ ಯಾಗುತ್ತಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅಲ್ಲದೆ ಮಳೆ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ ಎಂದು ವರದಿಯಾಗಿದೆ.

ಭಾರೀ ಮಳೆ ಹಿನ್ನಲೆ ಜಲಾಶಯ ಭರ್ತಿ ಯಾಗಿದ್ದು ಒಳಹರಿವಿನ ಪ್ರಮಾಣ 4565 ಕ್ಯೂಸೆಕ್‌ಗೆ ಏರಿದೆ. ಹೊರಹರಿವು 1 ಸಾವಿರ ಕ್ಯೂಸೆಕ್‌ ಇದೆ.84 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ 73.85 ಅಡಿ ನೀರು ಇದೆ.ಗರಿಷ್ಠ 19.52 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿದ್ದು, ಜಲಾಶಯದಲ್ಲಿ ಸದ್ಯಕ್ಕೆ 13.65 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 18.60 ಟಿಎಂಸಿ ನೀರು ಸಂಗ್ರಹವಿತ್ತು ಎನ್ನಲಾಗಿದೆ.

Latest Indian news

Popular Stories