ಇಂದಿನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇವೆ ಸಂಪೂರ್ಣ ಬಂದ್: ಪೇಟಿಎಂ ಯುಪಿಐ ಸೇವೆ ಮುಂದುವರಿಕೆ

ನವದೆಹಲಿ: ಕೆವೈಸಿ ದಾಖಲಾತಿಯಲ್ಲಿ ಅಕ್ರಮ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್‌ಬಿಐ ನಿಷೇಧ ಹೇರಿದ್ದು, ಮಾರ್ಚ್ 15 ರಿಂದ ಎಲ್ಲಾ ಸೇವೆಗಳ ಮೇಲಿನ ನಿರ್ಬಂಧ ಜಾರಿಗೆ ಬರಲಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆ ಮತ್ತು ಫಾಸ್ಟ್ ಟ್ಯಾಗ್ ಸೇರಿದಂತೆ ವಿವಿಧ ವ್ಯಾಲೆಟ್ ಗಳಲ್ಲಿ ಹಣವಿದ್ದರೆ ಅದು ಖಾಲಿಯಾಗುವವರೆಗೆ ಬಳಸಬಹುದು.

ಆದರೆ, ಅವುಗಳಿಗೆ ಮತ್ತೆ ರಿಚಾರ್ಜ್ ಮಾಡಲು ಅವಕಾಶ ಇರುವುದಿಲ್ಲ. ಫೆಬ್ರವರಿ 29ರಂದೇ ತನ್ನ ಎಲ್ಲಾ ಸೇವೆ ನಿಲ್ಲಿಸುವಂತೆ ಆರ್‌ಬಿಐ ಆದೇಶ ನೀಡಿ ನಂತರ ಮಾರ್ಚ್ 14ರವರೆಗೂ ವಿಸ್ತರಿಸಿದೆ.

ಕೆವೈಸಿ ಅಕ್ರಮ ಕಾರಣ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇವೆಗಳು ಮಾರ್ಚ್ 15 ರಿಂದ ನಿರ್ಬಂಧಿಸಲ್ಪಡುತ್ತವೆ. ಆದರೆ, ಜನರು ಖರೀದಿ ಇತರೆ ಹಣಕಾಸು ಸಂದರ್ಭದಲ್ಲಿ ಬಳಕೆ ಮಾಡುವ ಪೇಟಿಎಂ ಯುಪಿಐ ಸೇವೆ ಮುಂದುವರೆಯುತ್ತದೆ. ಪೇಟಿಎಂ ಆಪ್ ಗೆ ಯೆಸ್ ಬ್ಯಾಂಕ್ ಜೊತೆ ಒಪ್ಪಂದಕ್ಕೆ ಎನ್‌ಪಿಸಿಐ ಅನುಮತಿ ನೀಡಿದೆ.

ಪೇಟಿಎಂ ಬಳಕೆದಾರರು ಕಳುಹಿಸುವ ಹಣದ ವ್ಯವಹಾರ ಯೆಸ್ ಬ್ಯಾಂಕ್ ಮೂಲಕ ನಡೆಯುತ್ತದೆ. ಹೀಗಾಗಿ ಪೇಟಿಎಂ ಸೇವೆ ಮುಂದುವರೆಯುತ್ತದೆ. ಇದುವರೆಗೆ ಪೇಟಿಎಂ ಆಪ್ ಸೇವೆ ನಿರ್ಬಂಧಕ್ಕೆ ಒಳಗಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೂಲಕ ನಡೆಯುತ್ತಿತ್ತು. ಈಗ ಯೆಸ್ ಬ್ಯಾಂಕ್ ಮೂಲಕ ನಡೆಯಲಿದ್ದು, ಪೇಟಿಎಂ ಯುಪಿಐ ಸೇವೆ ಮುಂದುವರೆಯಲಿದೆ.

Latest Indian news

Popular Stories