ನವದೆಹಲಿ: ಇದು ರಾಜಕೀಯ ಚಳುವಳಿಯಲ್ಲ, ಇದು ಕನ್ನಡಿಗರ ಹಿತಕಾಪಾಡುವ ಚಳುವಳಿ ಅಂತ ನವದೆಹಲಿಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಅವರು ಇಂದು ಕೇಂದ್ರ ಸರ್ಕಾರದ ತೆರಿಗೆ ಅಸಹಕಾರಕ್ಕೆ ಸಂಬಂಧಪಟ್ಠಂತೆ ನಡೆಸುತ್ತಿರುವ ಚಲೋ ದಿಲ್ಲಿ ಪ್ರತಿಭಟನೆಗೂ ಮುನ್ನ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದರು.
ಇದೇ ವೇಳೆ ಅವರು ರಾಜ್ಯದ ಹಿತ ಕಾಪಾಡುವ ಸಲುವಾಗಿ ಎಲ್ಲಾ ಸಂಸದರಿಗೆ ಪತ್ರ ಬರೆಯಾಲಾಗಿದೆ ಅಂತ ಹೇಳಿದರು. ಇನ್ನೂ ಹಣಕಾಸು ಆಯೋಗ ಶಿಫಾರಸ್ಸು ಮಾಡಿರುವ ಹಣವನ್ನು ಕೂಡ ಕೇಂದ್ರ ಸರ್ಕಾರ ನೀಡಿಲ್ಲ ಅಂತ ಅವರು ಆರೋಪಿಸಿದರು. ಇನ್ನೂ ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚಾಗಿ ತೆರಿಗೆ ಹೋಗುತ್ತಿದೆ, ಆದರೆ ಅದನ್ನು ಕೂ ಡನೀಡುತ್ತಿಲ್ಲ ಅಂಥ ಹೇಳಿದರು.