ಹೂಡೆ: ಸಾಲಿಡಾರಿಟಿ ಯೂತ್’ಮೂವ್ಮೆಂಟ್ ವತಿಯಿಂದ ಉಚಿತ ನೇತ್ರಾ ತಪಾಸಣಾ ಶಿಬಿರ

ಹೂಡೆ: ಸಾಲಿಡಾರಿಟಿ ಯೂತ್’ಮೂವ್ಮೆಂಟ್, ಹೂಡೆ, ಎಚ್.ಆರ್.ಎಸ್ ಹೂಡೆ ಮತ್ತು ಶ್ರೀಹರಿ ನೇತ್ರಾಲಯ ವತಿಯಿಂದ ಸಾಲಿಹಾತ್ ವಿದ್ಯಾ ಸಂಸ್ಥೆಯಲ್ಲಿ ಉಚಿತ ನೇತ್ರಾ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಉಚಿತ ನೇತ್ರಾ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ, ಶ್ರೀಹರಿ ನೇತ್ರಾಲಯದ ನಿರ್ದೇಶಕರಾದ ಸುಬ್ರಹ್ಮಣ್ಯ ಒಕ್ಕೂಡ ಮಾತನಾಡಿ ಕಣ್ಣು ದೇವನ ಅತೀ ದೊಡ್ಡ ಕೊಡುಗೆಯಾಗಿದೆ. ಅದರ ಸುರಕ್ಷತೆ ಅತೀ ಅಗತ್ಯೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡ ಅದನ್ನು ನಿರ್ಲಕ್ಷಿಸದೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್, ಹೂಡೆಯ ಅಬ್ದುಲ್ ಕಾದೀರ್ ಮೊಯ್ದಿನ್ ಮಾತನಾಡಿದರು.

IMG 20230917 WA0067 1 PRESS RELEASE / ORGANISATIONS

ಈ ಸಂದರ್ಭದಲ್ಲಿ ನೇತ್ರ ತಜ್ಞರಾದ ಡಾ.ಹರಿ ಪ್ರಸಾದ್ ಒಕ್ಕೂಡ, ಡಾ.ರೂಪ ಶ್ರೀ ರಾವ್, ಸಾಲಿಡಾರಿಟಿ ಯೂತ್’ಮೂವ್ಮೆಂಟ್, ಜಿಲ್ಲಾಧ್ಯಕ್ಷರಾದ ನಬೀಲ್ ಗುಜ್ಜರ್’ಬೆಟ್ಟು, ಸಾಲಿಡಾರಿಟಿ ಹೂಡೆ ಅಧ್ಯಕ್ಷರಾದ ಜಾಬೀರ್ ಖತೀಬ್ ಉಪಸ್ಥಿತರಿದ್ದರು. ಸಾಲಿಡಾರಿಟಿ ಹೂಡೆಯ ಕಾರ್ಯದರ್ಶಿ ಜೌಹರ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ನೂರಾರು ಫಲನುಭವಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

IMG 20230917 WA0032 PRESS RELEASE / ORGANISATIONS
IMG 20230917 WA0039 PRESS RELEASE / ORGANISATIONS

Latest Indian news

Popular Stories