ರಾಜ್ಯ ಸರ್ಕಾರ ಕುಂಬಕರ್ಣ ರೀತಿಯಲ್ಲಿದೆ, ಎಚ್ಚರಿಸಬೇಕಾಗಿದೆ: ಮಾಜಿ ಸಿಎಂ ಯಡಿಯೂರಪ್ಪ

ಕೋಲಾರ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಆದರೆ ಸರ್ಕಾರ ಕುಂಬಕರ್ಣ ರೀತಿಯಲ್ಲಿದ್ದು, ಎಚ್ಚರಿಸಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಭಾನುವಾರ ಹೇಳಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಅವರು, ಹಬ್ಬದ ಬಳಿಕ ರಾಜ್ಯದ ಎಲ್ಲಾ ಮುಖಂಡರ ಜೊತೆ ಪ್ರತಿ ಜಿಲ್ಲೆಗೆ ಪ್ರವಾಸ ಮಾಡುತ್ತೇನೆ. ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುತ್ತೇವೆ, ಮೋದಿ ಮತ್ತೆ ಪ್ರಧಾನಿ ಆಗಬೇಕು. ಜನರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ತಿಳಿಸಿ ಪಕ್ಷ ಬಲಪಡಿಸುತ್ತೇವೆಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದುಕಿದ್ದು ಸತ್ತಂತಾಗಿದೆ. ಭೀಕರ ಬರ,ನೀರಿಗೆ ಹಾಹಾಕಾರ ಇದ್ದರೂ ಸರ್ಕಾರ ಮಾತ್ರ ಕುಂಭಕರ್ಣ ರೀತಿಯಲ್ಲಿದೆ. ಕಳೆದ ಬಾರಿಯಂತೆ ಬಿಜೆಪಿ 25 ಕ್ಕೂ ಹೆಚ್ಚು ಸೀಟು ಗೆಲ್ಲಲೇಬೇಕು. ಮೋದಿಯವರಿಗೆ ನಮ್ಮದೇ ಆದ ಕೊಡುಗೆ ನೀಡಿ ಬಲಪಡಿಸಬೇಕು ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಒಂದು ಕಿಮೀ ಸಹ ರಸ್ತೆ ಆಗಿಲ್ಲ, ಅಭಿವೃದ್ಧಿ ಸ್ಥಗಿತವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಜನರು ಮರೆತಿದ್ದಾರೆ ಎಂದು ಕಿಡಿಕಾರಿದರು.

Latest Indian news

Popular Stories